ಕನ್ನಡ ಕುಲದಲ್ಲಿ ಕನ್ನಡದ ಛಲವನ್ನು ಬಿತ್ತಿಬೆಳೆಸಿದ, ಕನ್ನಡದ ಸಂಶೋಧಕ ಹಾಗೂ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಇತಿಹಾಸ, ಗ್ರಂಥಸಂಪಾದನೆ, ಛಂದಸ್ಸು, ನಿಘಂಟು, ಭಾಷಾಂತರ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಕಾರ ನಿರ್ವಹಿಸಿದ ಪ್ರೊ. ಕೆ.ಜಿ. ಕುಂದಣಗಾರ ಅವರ ಬದುಕು ಮತ್ತು ಬರಹಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ಕೃತಿಯಲ್ಲಿದೆ.
ಮೂಲತಃ ವಿಜಯಪುರ ಜಿಲ್ಲೆಯ ಬಬಲಾದ ಗ್ರಾಮದವರಾದ ಮ.ಗು. ಬಿರಾದಾರ (ಎಂ.ಜಿ. ಬಿರಾದಾರ) 15ನೇ ಮಾರ್ಚ್ 1933ರಲ್ಲಿ ಜನಿಸಿದರು. ರತ್ನಾಕರ ವರ್ಣಿ ಹಾಗೂ ಆತನ ಕೃತಿಗಳ ಕುರಿತು ಸಂಶೋಧನಾ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದರು. ಕಾವ್ಯಸಿಂಧೂ -ಕವನ ಸಂಕಲನ, ಸವಕಳಿ-ಕಥಾ ಸಂಕಲನ, ಜೀವಂತ ಗೋರಿಗಳು ಮತ್ತು ಹದ್ದುಗಳು -ನಾಟಕ, ಹರದೇಶಿ-ನಾಗೇಶಿ-ಇವರ ಸಂಪಾದಿತ ಕೃತಿ, ನೂರೆಂಟು ಕಥೆಗಳು: ಕುಂದಣಗಾರರ ಸಾಹಿತ್ಯ, ಮಹಾದೇವಪ್ಪ ರಾಂಪೂರೆ, ಕೆ.ಜಿ. ಕುಂದಣಗಾರ ಅವರ ಜೀವನ ಕೃತಿಗಳು, ಜಾನಪದ ಜೀವಾಳ: ಜಾನಪದ ಸಮಾಲೋಚನೆ-ಇವರ ಕೃತಿಗಳು. ಇವರಿಗೆ ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ...
READ MORE