ಪ್ರಾಣಪದಕ

Author : ಅ.ನಾ. ಪ್ರಹ್ಲಾದರಾವ್

Pages 130

₹ 80.00




Year of Publication: 2013
Published by: ವಸಂತ ಪ್ರಕಾಶನ
Address: #360, 10ನೇ ಬಿ, ಮುಖ್ಯರಸ್ತೆ, ಕಾಸ್ಮೋಪಾಲಿಟನ್ ಕ್ಲಬ್ ಹತ್ತಿರ ಜಯನಗರ, ಬೆಂಗಳೂರು - 560011
Phone: 080 2244 3996

Synopsys

ಕನ್ನಡದ ಹೆಸರಾಂತ ನಟ ಡಾ. ರಾಜಕುಮಾರ್‌ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್‌. ಪಾರ್ವತಮ್ಮ ಅವರು ನಿರ್ಮಾಪಕಿ ಎಂದೇ ಚಿರಪರಿಚಿತರು. ಪಾರ್ವತಮ್ಮ ಅವರು ಲೇಖಕ ಪ್ರಹ್ಲಾದರಾವ್ ಅವರೊಂದಿಗೆ ತಮ್ಮ ಪತಿಯ ಕುರಿತ ನೆನಪುಗಳನ್ನು ಹಂಚಿಕೊಂಡಿದ್ದರು. ಈ ನೆನಪುಗಳು ಮಂಗಳ ಪತ್ರಿಕೆಯಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗಿದ್ದವು. ಅವುಗಳನ್ನ ’ಪ್ರಾಣಪದಕ’ ಪುಸ್ತಕದಲ್ಲಿ ಸಂಕಲಿಸಲಾಗಿದೆ.

 

About the Author

ಅ.ನಾ. ಪ್ರಹ್ಲಾದರಾವ್
(24 July 1953)

ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ.  ...

READ MORE

Related Books