ಪ್ರಭುರಾವ್ ಕಂಬಳಿವಾಲೆ ರವರು ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಸಿದ್ಧಿಯಾದವರು . ಕರ್ನಾಟಕ ಕಾಲೇಜು , ಬಿ . ವ್ಹಿ . ವಿ ಮಹಾವಿದ್ಯಾಲಯ ಮತ್ತು ಕರ್ನಾಟಕ ಸಂಘಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ . ಕನ್ನಡ ನಾಡು - ನುಡಿ , ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡದ ಫಕೀರ ಎಂದೆನಿಸಿಕೊಂಡಿದ್ದರು . ಪ್ರಭುರಾವ್ ಕಂಬಳಿವಾಲೆ ಯವರ ಬದುಕನ್ನು ’ ರಘುಶಂಖ ಭಾತಂಬ್ರ ’ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ .
ಬದುಕಿನ ಹಲವಾರು ಆಯಾಮಗಳನ್ನು ಹುಡುಕುವ ಸಂಶೋಧಕಿ ನಾಗಾಬಾಯಿ ಬಿ. ಬುಳ್ಳಾ ಅವರು 1957 ಜುಲೈ 01 ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲದಲ್ಲಿ ಜನಿಸಿದರು. ಡಾ. ಸಿದ್ದಯ್ಯ ಪುರಾಣಿಕರ ಕೃತಿಗಳು ಎಂಬ ಸಂಶೋಧನಾ ಕೃತಿಯನ್ನು ಕನ್ನಡದಲ್ಲಿ ಹೊರ ತಂದಿದ್ಧಾರೆ. ಅರಿವು, ಕಾವ್ಯಾನಂದ, ಜಯತೀರ್ಥ ರಾಜಪುರೋಹಿತ ಜಿ. ದೇವೇಂದ್ರಪ್ಪ ಘಾಳಪ್ಪ, ನಿಜಗುಣ ಶಿವಯೋಗಿ, ಶ್ರೀಮಾತಾ ಮಾಣಿಕೇಶ್ವರಿ, ಆಧುನಿಕ ಸಾಹಿತ್ಯ ಸಾಧಕರು ಸಂಶೋಧನಾ ಕೃತಿ, ನರಹರಿ ಮುತ್ತಿನಹಾರ ಮಾಲಿಕೆ, ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿ, ಅಂಬಿಗರ ಚೌಡಯ್ಯ, ಪ್ರಾಚೀನ ಕನ್ನಡ ಸಾಹಿತ್ಯ ಸಂಗ್ರಹ, ಮಹಾಕಾವ್ಯ ಚಿಂತನೆ, ಆಯ್ದ ವೈಜ್ಞಾನಿಕ ...
READ MORE