ʻಪೆರಿಯಾರ್ʼ ಎಂದೇ ಪ್ರಖ್ಯಾತರಾಗಿದ್ದ ಪೆರಿಯಾರ್ ರಾಮಸ್ವಾಮಿ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ, ʻತಮಿಳು ಸ್ವಾಭಿಮಾನ ಚಳುವಳಿʼಯ ನಾಯಕ ಹಾಗೂ ಸ್ವಾತಂತ್ರ ಹೋರಾಟಗಾರರಾಗಿ ಗುರುತಿಸಿಕೊಂಡವರು. ದ್ರಾವಿಡನಾಡಿನ ಪ್ರತಿಪಾದಕರಾಗಿ ಪ್ರತ್ಯೇಕ ದ್ರಾವಿಡ ರಾಜ್ಯ ನಿರ್ಮಾಣದ ಬಹುದೊಡ್ಡ ಕನಸು ಇಟ್ಟುಕೊಂಡಿದ್ದರು. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ಪಡೆದರೂ ಸಮಾಜದಲ್ಲಿ ಶೋಷಿತರ ದನಿಯಾಗಿ ಬದುಕಿದವರು. ಕಾಶಿಯಲ್ಲಿ ತಮಗಾದ ಅವಮಾನ ಇವರ ಮನಸ್ಸಿಗೆ ದೊಡ್ಡ ಗಾಯವುಂಟುಮಾಡಿದ್ದಲ್ಲದೆ, ಮುಂದೆ ಇವರಲ್ಲಿ ವೈದಿಕರು ಮತ್ತು ಜಾತಿ ಪದ್ಧತಿ ಬಗ್ಗೆ ತಿರಸ್ಕಾರ ಹುಟ್ಟುವಂತೆ ಮಾಡಿತು. ಆವರೆಗೆ ಆಸ್ತಿಕರಾಗಿದ್ದ ರಾಮಸ್ವಾಮಿ ಅಲ್ಲಿಂದ ಮುಂದಕ್ಕೆ ನಾಸ್ತಿಕರಾಗಿ ಬದಲಾದರು. ಹೀಗೆ ಪೆರಿಯಾರ್ ಅವರ ಜೀವನ ಕತೆಯನ್ನು ಲೇಖಕ ಸಿ. ಚಂದ್ರಪ್ಪ ಅವರು ತಮ್ಮ ಸಂಗ್ರಹ ಅನುವಾದ ʻಪೆರಿಯಾರ್: ಜೀವನ ಚರಿತ್ರೆʼ ಕೃತಿಯಲ್ಲಿ ಹೇಳಿದ್ದಾರೆ.
ಲೇಖಕ, ಚಿಂತಕ ಡಾ. ಸಿ. ಚಂದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿ ಮಸಲವಾಡ ಗ್ರಾಮದವರು. 1993ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್ಯಾಂಕ್ ದೊಂದಿಗೆ ಚಿನ್ನದ ಪದಕ ಪಡೆದರು. ಯುಜಿಸಿ ಫೆಲೋಷಿಪ್ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ (2001) ಪಿಎಚ್.ಡಿ .ಪಡೆದರು. 1996ರಲ್ಲಿ, ಚಿತ್ರದುರ್ಗದ ಸರ್ಕಾರದ ಕಾಲೇಜು ಉಪನ್ಯಾಸಕರಾಗಿ, ನಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಕೇಂದ್ರ ಸಂಯೋಜಕ, ಸಹ ಪ್ರಾಧ್ಯಾಪಕರಾದರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರ್ತೂರಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು. Urbanisation & Industrialisation in Karnataka, History and ...
READ MORE