‘ಪರಿಷ್ಕೃತೆ’ ಸುಧಾ ಚಿದಾನಂದ ಗೌಡ ಅವರ ಸಂಶೋಧನಾ ಸ್ವಪ್ರಬಂಧವಾಗಿದೆ. ಷೇಕ್ಸ್‌ಪಿಯರ್ ನಾಟಕಗಳನ್ನು ಕುರಿತ ಸಂಶೋಧನೆಗಳು ಹೆಚ್ಚೇ ಅನ್ನುವಷ್ಟು ಪ್ರಕಟಗೊಂಡಿವೆ. ಮಾರ್ಕ್ಸ್ ವಾದ, ಸ್ತ್ರೀವಾದ, ಪ್ರತಿಮಾವಾದ ಹಾಗೂ ವಸಾಹತು ಹಿನ್ನೆಲೆಯ ದೃಷ್ಟಿಕೋನಗಳಿಂದ ನೋಡಿರುವ ವಿಮರ್ಶೆಗಳು, ಸಂಶೋಧನಾ ಕೃತಿಗಳು ಹೊರಬಂದಿದೆ. ಒಬ್ಬ ಸಾಹಿತಿಯನ್ನು-ಸಾಹಿತ್ಯವನ್ನು ಒಂದು ನೆಲೆಯಿಂದ ನೋಡುವುದು. ಆ ಕಲೆಗೆ-ಕಲಾಕೃತಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆಯೇ..? ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಷೇಕ್ಸ್ಪಿಯರ್ ಸೃಷ್ಟಿಸಿದ ಅಸಂಖ್ಯಾತ ಪಾತ್ರಗಳಲ್ಲಿ ಮಹಿಳೆಯರದೇ ವಿಶಿಷ್ಟ ಸ್ಥಾನ. ಈತನ ಸ್ತ್ರೀ ಪಾತ್ರಗಳು ಪಾತ್ರದಿಂದ ಪಾತ್ರಕ್ಕೆ ವೈವಿಧ್ಯತೆಯಿಂದ ಕೂಡಿದೆ. ಈ ಕೃತಿ ಸ್ತ್ರೀ ಚಿಂತನೆ ಮಾತ್ರವಲ್ಲದೆ ಷೇಕ್ಸ್‌ಪಿಯನ ಬದುಕಿನ ಪ್ರಮುಖ ಘಟ್ಟಗಳು ಹಾಗೂ ಆತನ ಸಮಗ್ರ ಬರಹಗಳ ಬಗ್ಗೆ ತುಲನಾತ್ಮಕ ಚರ್ಚೆ ನಡೆಸುತ್ತದೆ. ಒಟ್ಟಾರೆ ಷೇಕ್ಸ್‌ಪಿಯರ್‌ನ ಸಮಗ್ರ ಮಾಹಿತಿಯ ಕೋಶವಾಗಿಯೂ ಕೃತಿಯನ್ನು ಗಮನಿಸಬಹುದು.
(ಹೊಸತು, ಮೇ 2013, ಪುಸ್ತಕದ ಪರಿಚಯ)
ಪ್ರಪಂಚದ ಪ್ರಹಸನಗಳ ಇತಿಹಾಸದಲ್ಲಿ ಪ್ರಮುಖವಾಗಿ ನಿಲ್ಲುವ ಹೆಸರು ಇಂಗ್ಲಿಷ್ ನಾಟಕಕಾರ ''ವಿಲಿಯಂ ಷೇಕ್ಸ್‌ಪಿಯರ್. ಈತ ತಾನು ಸೃಷ್ಟಿಸಿದ ಪ್ರತಿ ಪಾತ್ರದ ಅಂತರ್ಯವನ್ನು ಹೊರಗೆಡವುತ್ತಾನೆ. ಹಾಗಾಗಿ ಈತನ ಕೃತಿಗಳ ಪಾತ್ರಗಳು ಕಾಲಾತೀತವಾಗಿ ಜೀವಂತಿಕೆಯನ್ನು ಪಡೆಯುತ್ತವೆ. ಒಳಿತು-ಕೆಡುಕುಗಳ ಭೇದವನ್ನೇ ಮುಖ್ಯವಾಗಿಸಿಕೊಳ್ಳುವ, ಅದನ್ನು ಮನಮುಟ್ಟುವಂತೆ ಹೇಳುವ ಷೇಕ್ಸ್ಪಿಯರ್ ಸಂಕೇತಗಳನ್ನು ಅಷ್ಟೇ ಅದ್ಭುತವಾಗಿ ಬಳಸಿಕೊಂಡಿದ್ದಾನೆ. ಷೇಕ್ಸ್‌ಪಿಯರ್ ನಾಟಕಗಳನ್ನು ಕುರಿತ ಸಂಶೋಧನೆಗಳು ಹೆಚ್ಚೇ ಅನ್ನುವಷ್ಟು ಪ್ರಕಟಗೊಂಡಿವೆ. ಮಾರ್ಕ್ಸ್ ವಾದ, ಸ್ತ್ರೀವಾದ, ಪ್ರತಿಮಾವಾದ ಹಾಗೂ ವಸಾಹತು ಹಿನ್ನೆಲೆಯ ದೃಷ್ಟಿಕೋನಗಳಿಂದ ನೋಡಿರುವ ವಿಮರ್ಶೆಗಳು, ಸಂಶೋಧನಾ ಕೃತಿಗಳು ಹೊರಬಂದಿದೆ. ಹೀಗೆ ಒಬ್ಬ ಸಾಹಿತಿಯನ್ನು-ಸಾಹಿತ್ಯವನ್ನು ಒಂದು ನೆಲೆಯಿಂದ ನೋಡುವುದು. ಆ ಕಲೆಗೆ-ಕಲಾಕೃತಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆಯೇ..? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಸುಧಾ ಚಿದಾನಂದಗೌಡರ ಸ್ತ್ರೀ ದೃಷ್ಟಿಕೋನದ ಚಿಂತನ ಇಲ್ಲಿಯತನಕ ಇತರ ಸಂಶೋಧನಾ ಗ್ರಂಥಗಳಲ್ಲಿ ಕಾಣದ ಅಂಶಗಳು, ಹಲವು ನಿರ್ಲಕ್ಷಿತ ಸ್ತ್ರೀ ಪಾತ್ರಗಳ ಕಡೆ ಬೆಳಕು ಚೆಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಮನಗಾಣಿಸುತ್ತದೆ. ಉದಾ: ಜಾರ್ಮಿಯನ್, ಕ್ಲಿಯೋಪಾತ್ರ, ಪೆರೇಟ್, ಲೇಡಿ ಮ್ಯಾಕ್ ಡಫ್, ಒಕ್ಟೇಮಿಯಾ, ಫುಲ್ ವಿಯಾ, ಇರಾಸ್ - ಮುಂತಾದವು. ಷೇಕ್ಸ್ಪಿಯರ್ ಸೃಷ್ಟಿಸಿದ ಅಸಂಖ್ಯಾತ ಪಾತ್ರಗಳಲ್ಲಿ ಮಹಿಳೆಯರದೇ ವಿಶಿಷ್ಟ ಸ್ಥಾನ. ಈತನ ಸ್ತ್ರೀ ಪಾತ್ರಗಳು ಪಾತ್ರದಿಂದ ಪಾತ್ರಕ್ಕೆ ವೈವಿಧ್ಯತೆಯಿಂದ ಕೂಡಿದೆ. ಈ ಕೃತಿ ಸ್ತ್ರೀ ಚಿಂತನೆ ಮಾತ್ರವಲ್ಲದೆ ಷೇಕ್ಸ್‌ಪಿಯನ ಬದುಕಿನ ಪ್ರಮುಖ ಘಟ್ಟಗಳು ಹಾಗೂ ಆತನ ಸಮಗ್ರ ಬರಹಗಳ ಬಗ್ಗೆ ತುಲನಾತ್ಮಕ ಚರ್ಚೆ ನಡೆಸುತ್ತದೆ. ಒಟ್ಟಾರೆ ಷೇಕ್ಸ್‌ಪಿಯರ್‌ನ ಸಮಗ್ರ ಮಾಹಿತಿಯ ಕೋಶವಾಗಿಯೂ ಕೃತಿಯನ್ನು ಗಮನಿಸಬಹುದು.
©2024 Book Brahma Private Limited.