ತಮ್ಮ ಆದರ್ಶ, ನಿಷ್ಠೆ, ಕಾರ್ಯತತ್ಪರತೆ, ನೇರ ನಡವಳಿಕೆಯಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಂತಕತೆಯಾದವರು ಡಾ. ಎಚ್. ನರಸಿಂಹಯ್ಯನವರು. ಪ್ರತಿಷ್ಠಿತ ನ್ಯಾಷನಲ್ ಕಾಲೇಜು ಮತ್ತು ಅದರ ವಿದ್ಯಾಸಂಸ್ಥೆ ಇವರು ಈ ನಾಡಿಗೆ ಕೊಟ್ಟ ಅತ್ಯದ್ಭುತ ಕೊಡುಗೆ. ಇವರ ಸರಳ, ನಿಸ್ವಾರ್ಥ, ಕಾಯಕನಿಷ್ಠ ಜೀವನ ಶೈಲಿ ಇವತ್ತಿನ ಪೀಳಿಗೆಗೆ ಆದರ್ಶವಾಗುವಂತದ್ದು. ಇದೇ ಉದ್ದೇಶದಿಂದ ಲೇಖಕ ಬಿ. ಗಂಗಾಧರಮೂರ್ತಿ ಈ ಕೃತಿಯನ್ನು ರಚಿಸಿ ಓದುಗರ ಮುಂದಿಟ್ಟಿದ್ದಾರೆ.
ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಮೂಲತಃ ಹೊಳೆನರಸೀಪುರದವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಸುಮಾರು 30 ಬೊಧನೆ ಮಾಡಿದವರು. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು. ಕರ್ನಾಟಕದ ಗೌರಿಬಿದನೂರು ನಗರದಲ್ಲಿ ವಾಸವಿದ್ದು, ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ...
READ MORE