ನುಡಿಸಸಿ

Author : ಎಸ್. ಆರ್. ವಿಜಯಶಂಕರ್

Pages 280

₹ 180.00




Year of Publication: 2012
Published by: ಕನ್ನಡ ಸಂಘ
Address: ಕ್ರೈಸ್ತ್  ಯುನಿವರ್ಸಿಟಿ, ಹೊಸೂರು ಮಾರ್ಗ, ಬೆಂಗಳೂರು- 560029

Synopsys

ಖ್ಯಾತ ವಿಮರ್ಶಕ ಆರ್.‌ ಎಸ್‌ ವಿಜಯಶಂಕರ ಅವರ  ಲೇಖನಗಳ ಸಂಕಲನ-ನುಡಿಸಸಿ. ಈ ಕೃತಿಗೆ ಬೆನ್ನುಡಿ ಬರೆದ ಚಂದ್ರಶೇಖರ ಪಾಟೀಲರು ‘ಸಮಕಾಲೀನ ಸಂಗತಿಗಳನ್ನು ನಿಮಿತ್ತವಾಗಿ ಇರಿಸಿಕೊಂಡೂ ಕಾಲ-ದೇಶಗಳ ಗೆರೆ ಮೀರಿ ಗಂಭೀರ ಚಿಂತನೆಗೆ ಅವಕಾಶ ಮಾಡಿಕೊಡುವ ವಿಜಯಶಂಕರ ಅವರ ಅಂಕಣ ಬರಹಗಳು ಯಾವುದೇ ನಿಯತಕಾಲಿಕ ಸಾಹಿತ್ಯ ಪತ್ರಿಕೆಗಳಲ್ಲೂ ಬರುವಂಥವು. ಅನವಶ್ಯಕ ಕ್ಲಿಷ್ಟತೆಯಾಗಲಿ, ಪಾಂಡಿತ್ಯ- ಪ್ರದರ್ಶನವಾಗಲಿ ಇಲ್ಲದೆ ಓದುಗನನ್ನು ತನ್ನೊಂದಿಗೆ ಕೈಹಿಡಿದು ಕರೆದುಕೊಂಡು ಹೋಗುವ ಹೃದ್ಯವಾದ ಶೈಲಿ ವಿಜಯಶಂಕರ ಅವರದು. ಈ ಅಧ್ಯಯನದ ಬೀಸು ಬಹಳ ದೊಡ್ಡದು. ದೇಶಿ- ವಿದೇಶಿ , ಪ್ರಾಚೀನ- ಅರ್ವಾಚೀನ ಎಂಬ ಯಾವ ಸೀಮಾರೇಖೆಯೂ ಇಲ್ಲಿಲ್ಲ. ಒಂದು ಒಳನೋಟ ಇನ್ನೊಂದಕ್ಕೆ ಹಾದಿ ಮಾಡುತ್ತಾ ಓದುಗರನ್ನು ಸಹಜ ಲಯದಲ್ಲಿ ಕರಕೊಂಡು ಹೋಗುವ, ತನ್ನ ಅನುಭವವನ್ನು ಅದರಲ್ಲೂ ಹಂಚಿಕೊಳ್ಳುವ ರೀತಿಯ ನಿರೂಪಣಾ ವಿಧಾನವಾಗಿದೆ ’ ಎಂದು ಪ್ರಶಂಸಿಸಿದ್ದಾರೆ.

ಖ್ಯಾತ ಬರಹಗಾರ  ಕೆ.ವಿ ತಿರುಮಲೇಶ್‌ ಅವರು ಈ ಕೃತಿಯ ಕುರಿತು ‘ವಿಜಯಶಂಕರ ಅವರ ಬರಹಗಳಲ್ಲಿ ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಜನಾಂಗ ಪ್ರಗತಿಗೊಳ್ಳುವುದು ಅಸಾಧ್ಯ ’ ಎಂಬುದನ್ನು ಗುರುತಿಸಿ ಪ್ರಶಂಸಿಸಿದ್ದಾರೆ. .

 

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books