ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರ ಕೃತಿ-ನಿಜಶರಣ ಅಂಬಿಗರ ಚೌಡಯ್ಯ. ಈ ಕೃತಿಯು ಗುಲಬರ್ಗಾ ವಿ.ವಿ.ಗೆ ಸಲ್ಲಿಸಿದ ಅವರ ಸಂಶೋಧನಾ ಮಹಾಪ್ರಬಂಧವೂ ಆಗಿದೆ. 12ನೇ ಶತಮಾನದ ಶರಣರ ಪೈಕಿ ಅಂಬಿಗರ ಚೌಡಯ್ಯನ ವಚನಗಳು ತುಂಬಾ ಕಟುವಾಗಿವೆ. ನೇರ ಹಾಗೂ ನಿಷ್ಠುರವಾಗಿವೆ. ಸಾಹಿತಿ ಡಾ. ಬಸವರಾಜ ಸಬರದ ಅವರು ಕೃತಿಗೆ ಬೆನ್ನುಡಿ ಬರೆದು ‘ಈ ಕೃತಿಯು ಹೊಸ ಶೋಧ ಹಾಗೂ ಶಿಸ್ತಿನ ಅಧ್ಯಯನವನ್ನು ಒಳಗೊಂಡಿದೆ. ಶರಣ ಚೌಡಯ್ಯನವರ ಬದುಕು-ಬಂಡಾಯ-ಅಧ್ಯಾತ್ಮ-ಅನುಭಾವ-ಸ್ವಭಾವಗಳನ್ನು ಕುರಿತು ವಿವರವಾಗಿ ಚರ್ಚಿಸಲಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.