ನೇತಾಜಿ ಸುಭಾಶ್ ಚಂದ್ರ ಬೋಸ್

Author : ಆರ್.ವಿ. ಭಂಡಾರಿ

Pages 34

₹ 4.00




Year of Publication: 1997
Published by: ಚಿಂತನ ಉತ್ತರ ಕನ್ನಡ
Address: ದ್ವಾರ.ಚಿಂತನ ಕನ್ನಡ ಪುಸ್ತಕ ಮಳಿಗೆ, ಪಂಡಿತ ಸಾರ್ವಜನಿಕ ಗ್ರಂಥಾಲಯ ಕಟ್ಟಡ, ಬಸ್ ಸ್ಟಾಂಡ್ ಹತ್ತಿರ, ಶಿರಸಿ, ಉತ್ತರ ಕನ್ನಡ -581401

Synopsys

‘ನೇತಾಜಿ ಸುಭಾಶ್ ಚಂದ್ರ ಬೋಸ್’ ಚಿಂತನ ಕಿರು ಪುಸ್ತಕ ಮಾಲೆ ಯೋಜನೆಯಲ್ಲಿ ಪ್ರಕಟವಾದ ಕಿರು ಪುಸ್ತಕ. ಈ ಪುಸ್ತಕವನ್ನು ಲೇಖಕ ಆರ್.ವಿ. ಭಂಡಾರಿ ರಚಿಸಿದ್ದಾರೆ. ಸ್ವಾತಂತ್ರ್ಯ ಆಂದೋಲನದ ವಿಭಿನ್ನ ಆಯಾಮಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಈ ಕೃತಿಯನ್ನು ಪ್ರಕಟಿಸಲಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ನೇತಾಜಿಯವರು ಮರೆಯಲಾಗದ ಹೆಸರು. ಗಾಂಧೀಜಿಯವರನ್ನು ಗೌರವಿಸಿಯೂ ಅವರ ವೈಚಾರಿಕತೆಯ ವಿರುದ್ಧ ಯೋಚಿಸಿ, ಸೈನ್ಯಶಕ್ತಿಯ ಮೂಲಕ ಬ್ರಿಟೀರನ್ನು ಓಡಿಸುವ ಛಲಹೊತ್ತು. ಈ ನೆಲಬಿಟ್ಟು ವಿದೇಶದಲ್ಲಿ ನೆಲೆನಿಂತು ಹೋರಾಡಿದ ವ್ಯಕ್ತಿ ಈತ. ಅವರ ಹೋರಾಟ ಇಂದು ನಮ್ಮ ಮಾರ್ಗವಾಗಬೇಕಾಗಿದೆ. ಈ ಕಾರಣಕ್ಕಾಗಿ ಅವರ ಜೀವನ-ಹೋರಾಟವನ್ನು ನೆನಪಿಸುವ ಈ ಕಿರುಹೊತ್ತಿಗೆಯನ್ನು ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ ಚಿಂತನ ಪ್ರಕಾಶನದ ಸಂಚಾಲಕರು. ನೇತಾಜಿಯವರ ಜನ್ಮ ಶತಾಬ್ದಿ ಸಮಯದಲ್ಲಿ ಈ ಕೃತಿ ಪ್ರಕಟಗೊಂಡಿದೆ.

About the Author

ಆರ್.ವಿ. ಭಂಡಾರಿ
(05 May 1936)

ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ  ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...

READ MORE

Related Books