ವಾರ್ತಾ ಭಾರತಿ ಪತ್ರಿಕೆಗೆ ಜಿ.ಎನ್. ರಂಗನಾಥ ರಾವ್ ಅವರು ಬರೆದ ‘ನೇಸರ ನೋಡು, ನೇಸಾರ ನೋಡು’ ಅಂಕಣಗಳ ಸಂಕಲನ ಇದಾಗಿದೆ. ಇದರಲ್ಲಿ ಸಾಹಿತ್ಯಕ ವಿಷಯಗಳ ಕುರಿತು ಲೇಖಕರು ಬರೆದ ಲೇಖನಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಇಲ್ಲಿರುವ ಬಹುತೇಕ ಹೆಚ್ಚಿನ ಬರಹಗಳು ವ್ಯಕ್ತಿಚಿತ್ರಗಳು ಎಂದು ಕರೆಯಬಹುದಾದ ಪ್ರಕಾರಕ್ಕೆ ಸೇರಿದವುಗಳು. ಆದರೆ ಅವು ವ್ಯಕ್ತಿಯ ಬರಹಗಾರ ಹಾಗೂ ವ್ಯಕ್ತಿಯ ಸಂಬಂಧದ ಸುತ್ತ ಹೆಣೆದಿರುವ ಬರಹಗಳಲ್ಲ. ಆ ವ್ಯಕ್ತಿಗಳ ಸಾರ್ವಜನಿಕ ಕ್ಷೇತ್ರದ ಮುಖವನ್ನು ಅವರ ಬರಹ-ಚಿಂತನೆಗಳ ಜೊತೆ ಮುಖಾಮುಖಿಯಾಗಿಸಿ ಮಾಡಿದ ವಿಶ್ಲೇಷಣೆಗಳಿಗೆ ಇಲ್ಲಿ ಪ್ರಾಧಾನ್ಯ ನೀಡಲಾಗಿದೆ. ಮಾಹಿತಿಗಳೊಡನೆ ಸರಳವಾಗಿ ಪ್ರಾರಂಭವಾಗಿ ಆಳ ವಿಸ್ತಾರಗಳನ್ನು ಪಡೆಯುತ್ತಾ ಸಾಗುವ ಇಲ್ಲಿನ ಬರಹಗಳು ವಿಸ್ತಾರವಾದ ನದಿಯ ಹರಿವನ್ನು ನೆನಪಿಸುತ್ತವೆ. ಅವುಗಳ ಹಿಂದೆ ಲೇಖಕರ ಸುದೀರ್ಘ ಅಧ್ಯಯನ ಹಾಗೂ ಬರಹಗಳ ಬಗೆಗಿನ ನೈತಿಕ ಶ್ರದ್ಧೆ ಕೆಲಸ ಮಾಡಿದೆ.
©2024 Book Brahma Private Limited.