ಟಿ. ಆರ್. ಶಾಮಣ್ಣನವರ ಜೀವನ ಸಾಧನೆಯನ್ನು ಕುರಿತು ಡಾ|| ರಾಜಶ್ರೀಯವರು ಬರೆದಿರುವ ಪುಸ್ತಕಕ್ಕೆ ಒಂದು ಮುನ್ನುಡಿ ಬರೆಯುವ ಸುಯೋಗ ನನಗೆ ದೊರೆತಿದೆ. ಪರಿಸ್ಥಿತಿಯ ಕಾರಣದಿಂದ ಸಣ್ಣವನಿದ್ದಾಗಲೇ ಬಡತನಕ್ಕೆ ತಳ್ಳಲಾದ ಟಿ. ಆರ್. ಶಾಮಣ್ಣನವರು ಪಟ್ಟಪಾಡು, ಅದನ್ನು ಮೆಟ್ಟಿನಿಂತು, ಸ್ವಂತ ಪರಿಶ್ರಮದಿಂದ ಅವರು ಮುಂದೆ ಬಂದದ್ದು. ಆರ್ತರಿಗೆ ಆಸರೆ ಇತ್ತು ನ್ಯಾಷನಲ್ ಹೈಸ್ಕೂಲಿನ ಪ್ರಗತಿಗೆ ದುಡಿದದ್ದು, ನಗರ ಪಾಲಿಕೆ ಸದಸ್ಯರಾಗಿ, ಬೈಸಿಕಲ್ ತೆರಿಗೆ ತೆಗೆಸಿದ್ದು, ಮನೆಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಲು, ಉಚಿತವಾಗಿ ಪದ್ಧತಿಯನ್ನು ತಪ್ಪಿಸಿ ಪ್ರತಿ ಹನಿ ನೀರಿಗೂ ಹಣ ಕೊಡಬೇಕೆಂದು ಕಾನೂನು ಮಾಡಿದ್ದನ್ನು ಪ್ರತಿಭಟಿಸಿ ಜನತಾ ಆಂದೋಲನ ನಡೆಸಿ ಆ ಆಜ್ಞೆಯನ್ನು ಸರ್ಕಾರ ಹಿಂತೆಗೆದುಕೊಳ್ಳುವಂತೆ ಮಾಡಿದ್ದು, ಕಾವೇರಿ ನೀರನ್ನ ಬೆಂಗಳೂರಿಗೆ ಪ್ರಥಮ ಬಾರಿಗೆ ಹರಿಸಿ, ನೀರಿನ ಬರ ಇಂಗಿಸಿದ್ದು ಮುಂತಾದ ಉಪಯುಕ್ತ ಕಾರ್ಯಗಳನ್ನು ಮಾಡಿದ ಟಿ. ಆರ್. ಶಾಮಣ್ಣನವರು ಬೆಂಗಳೂರಿನ ಜನರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವವರು. ಎಂದು ಎಚ್. ಎಸ್. ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...
READ MORE