ನ. ಭದ್ರಯ್ಯ

Author : ಅರ್ಜುನಪುರಿ ಅಪ್ಪಾಜಿಗೌಡ

Pages 88

₹ 60.00




Year of Publication: 2014
Published by: ಉದಯಭಾನು ಕಲಾ ಸಂಘ
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ ಗವಿಪುರ ಸಾಲುಛತ್ರಗಳ ಎದುರು ರಾಮಕೃಷ್ಣ ಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು - 560019
Phone: 08026609343

Synopsys

ನ.ಭದ್ರಯ್ಯನವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ’ಅಕ್ಷರ ಪ್ರಚಾರ ಸಮಿತಿ’ ಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದರು. ನಿರಂತರವಾಗಿ ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳು, ಸಮಸ್ಯೆಗಳ ಬಗ್ಗೆ ಚಿಂತನಶೀಲರಾಗಿದ್ದರು. ನಿರಕ್ಷರತಾ ನಿವಾರಣೆ, ಗ್ರಾಮಸೇವಾ ಶಿಬಿರ, ಜನತಾ ಶಿಕ್ಷಣ, ಅಕ್ಷರ ಪ್ರಚಾರ ತರಗತಿಗಳ ನಿರ್ವಹಣೆ, ಪುಸ್ತಕ ಭಂಡಾರ ವಾಚನಾಲಯಗಳ ಸ್ಥಾಪನೆ, ಔದ್ಯೋಗಿಕ ತರಬೇತಿ ಕೇಂದ್ರಗಳ ಸ್ಥಾಪನೆಗಳ ಕಾರ್ಯಕ್ಕೆ ಮುಂದಾಗಿ ದುಡಿದವರು. ಇದರ ಜೊತೆಯಲ್ಲೇ ಜನಪದ ಕಲೆಗಳ ಪ್ರೋತ್ಸಾಹವನ್ನು ಪ್ರಚುರಪಡಿಸುವ ಮೂಲಕ ಸಮಾಜದ ಧೀಮಂತ ವ್ತಕ್ತಿಯಾದರು. ಇವರ ಸಂಪೂರ್ಣ ವಿವರಗಳನ್ನೊಳಗೊಂಡ ಈ ಪುಸ್ತಕ ವಿಶೇಷವಾಗಿದೆ. 

About the Author

ಅರ್ಜುನಪುರಿ ಅಪ್ಪಾಜಿಗೌಡ - 29 April 2017)

ಡಾ. ಅರ್ಜುನಪುರಿ ಅಪ್ಪಾಜಿಗೌಡ  ಅವರು  ನಿವೃತ್ತ ಪ್ರಾಂಶುಪಾಲ, ಸಾಹಿತಿ ಹಾಗೂ ಪತ್ರಕರ್ತರಾಗಿದ್ದರು. ಕನ್ನಡದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದಿದ್ದ ಅವರು ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಎಚ್‌.ಕೆ.ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 'ದೌರ್ಬಲ್ಯ, “ಹೀಗೊಂದು ಬಾಳು' ಮುಂತಾದ ಕಾದಂಬರಿ ರಚಿಸಿದ್ದರು. 'ನಂಜನಗೂಡು ತಿರುಮಲಾಂಬ ಒಂದು ಅಧ್ಯಯನ' ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಪಿಎಚ್‌.ಡಿ ಪದವಿ ನೀಡಿತ್ತು. 'ಪ್ರಜಾವಾಣಿ' ಹಾಗೂ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗಳ ಮದ್ದೂರು ವರದಿಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮದ್ದೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ನಿಸರ್ಗದ ಕರೆ, ಕುವೆಂಪು ಸಾಹಿತ್ಯ ...

READ MORE

Related Books