ಎ.ಎಸ್.ಮಕಾನದಾರ ಕನ್ನಡದಲ್ಲಿ ಹೆಸರು ಮಾಡಿದ ಸೂಕ್ಷ್ಮ ಸಂವೇದನೆಯ ಬರಹಗಾರ. ಬರವಣಿಗೆ ಕೇವಲ ತಪಸ್ಸಲ್ಲ ಅದರಾಚೆಗಿನ ಮಹಾಧ್ಯಾನ. ಎ.ಎಸ್.ಮಕಾನದಾರ ಅವರ ವ್ಯಕ್ತಿ ಚಿತ್ರಗಳ ಅಂಕಣ ಬರಹ ‘ಮುತ್ತಿನ ತೆನೆ’. ಲೇಖಕ ಸಿದ್ದುಯಾಪಲಪರವಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಏನಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು.ಕೆಲವರಿಗೆ ಇದು ದೇವಕೊಡುಗೆ ಮತ್ತೆ ಕೆಲವರು ಸಾಧನೆಯಿಂದ ರೂಢಿಸಿಕೊಂಡಿರುತ್ತಾರೆ. ಮಕಾನದಾರ ಅವರು ತಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ( ಅಂದರೆ ನ್ಯಾಯಾಧೀಶರು ಮತ್ತು ವಕೀಲರನ್ನು ಹೊರತುಪಡಿಸಿ) ಸಾಧನೆಗಳನ್ನು ಇಲ್ಲಿನ ಲೇಖನಗಳಲ್ಲಿ ತುಂಬಾ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಬಹುಶಃ ಇಲಾಖೆಯ ಪತ್ರಿಕೆಯೊಂದು ಈ ರೀತಿಯ ದಾಖಲಾರ್ಹ ಕಾರ್ಯ ಮಾಡಿದ್ದು ಇದೇ ಪ್ರಥಮ ಎನಿಸುತ್ತದೆ. ನ್ಯಾಯಾಂಗ ಇಲಾಖೆಯ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಾಧಕರ ಪರಿಚಯ ಇಲ್ಲಿದೆ.ಇವರೆಲ್ಲ ತುಂಬಾ ಹೆಸರು ಮಾಡಿದ ವ್ಯಕ್ತಿಗಳು ಆದರೆ ಇವರೆಲ್ಲ ನ್ಯಾಯಾಂಗ ಇಲಾಖೆಯವರು ಎಂಬುದು ಲೇಖನಗಳನ್ನು ಓದಿದ ಮೇಲೆ ಗೊತ್ತಾಯಿತು. ತಮ್ಮ ಇಲಾಖೆಯ ಕರ್ತವ್ಯ ನಿರ್ವಹಿಸಿ ಉಳಿದ ಅಲ್ಪ ಸಮಯದಲ್ಲಿ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಗೆ ಸಮಯ ಹೊಂದಿಸಿಕೊಂಡಿರುವುದು ಅನುಕರಣೀಯ ಮತ್ತು ಅಭಿನಂದನೀಯ ಎಂಬುದಾಗಿ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.