“ಮುಳುಗಡೆಯ ನೆನಪುಗಳು” ಅಂಕಣಗಳ ಸಂಗ್ರಹ. ಕೊನೆಯ ಲೇಖನ “ಮುಳುಗಡೆ ಎಂಬ ಶಾಪ ಯಾರಿಗೂ ಬೇಡ”, ಈ ಲೇಖನದ ಕೊನೆಯಲ್ಲಿ ತಾವು ಬಿಟ್ಟು ಬಂದ ಹಳ್ಳಿಗೆ ಅನೇಕ ವರ್ಷಗಳ ನಂತರ ಹೋದಾಗ ಅಲ್ಲಿನವರೆಲ್ಲ ತೋರಿಸುವ ಪ್ರೀತಿ, ಅಭಿಮಾನ, ಆದರ ಕಂಡು ಕರಗುವ ಪ್ರಭಾಕರ ಕಾರಂತರು “ನಮ್ಮನ್ನು ನಮ್ಮೂರಿನಿಂದಲೇ ದೂರ ಮಾಡಿದ ಮುಳುಗಡೆ ಎಂಬ ಶಾಪ ಇನ್ಯಾರಿಗೂ ಬೇಡವೇ ಬೇಡ,” ಎಂದು ಮರುಗುತ್ತಾರೆ. ಮುಳುಗಡೆಯಿಂದಾಗಿ ಪಲ್ಲಟಗೊಂಡು, ತಮ್ಮೆಲ್ಲ ಬೇರುಗಳನ್ನು ಕಿತ್ತುಕೊಂಡು ಹೋಗಿ ಕಾಣದ ಊರಿನಲ್ಲಿ ಪುನಃ ಹೊಸದಾಗಿ ಬೇರೂರಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವವರ ಕಷ್ಟ ಕೋಟಲೆಗಳನ್ನು ಸಮೀಪದಿಂದ ನೋಡಿರುವುದರಿಂದ ಕಾರಂತರು ವಿಷಾದದಿಂದ ಹೇಳುವಂತೆಯೇ ಮುಳುಗಡೆ ಒಂದು ಅಸಹಿತ ಎನ್ನುವ ಭಾವಕ್ಕೆ ’ಮುಳುಗಡೆಯ ನೆನಪುಗಳು” ಹತ್ತಿರವಾಗುತ್ತದೆ.
©2024 Book Brahma Private Limited.