ಮಿಶೆಲ್ ಫುಕೋ

Author : ಎ.ಪಿ. ಅಶ್ವಿನ್ ಕುಮಾರ್

Pages 185

₹ 204.00




Published by: ಪರಸ್ಪರ ಪ್ರಕಾಶನ
Address: ಪರಸ್ಪರ ಪ್ರಕಾಶನ, ಸೂಲಿಕೆರೆ, ಬೆಂಗಳೂರು

Synopsys

ಫ್ರೆಂಚ್ ತತ್ವಶಾಸ್ತ್ರಜ್ಞ, ವೈಚಾರಿಕ ಇತಿಹಾಸಕಾರ, ಸಾಮಾಜಶಾಸ್ತ್ರಜ್ಞ, ಭಾಷಾತಜ್ಞ ಮತ್ತು ಸಾಹಿತ್ಯ ವಿಮರ್ಶಕ ಮಿಶೆಲ್ ಫುಕೋ ಅವರ ಚಿಂತನೆಗಳು ಆಧುನಿಕ ತತ್ವಜ್ಞಾನಿಗಳ ಮೇಲೆ ಗಾಢವಾದ ಪ್ರಭಾವ ಬೀರಿದೆ. ಈತನ ಬರವಣಿಗೆಯ ಸಾರಾಂಶಗಳು ಮತ್ತು ಪುಕೋನ ಕುರಿತ ವಿವರಗಳು ಕನ್ನಡದಲ್ಲಿ ಲಭ್ಯವಿದ್ದರೂ, ಅವನದೇ ಬರಹಗಳ ಅನುವಾದ ಕನ್ನಡದಲ್ಲಿ ಲಭ್ಯವಿಲ್ಲ. ಈ ಕೊರತೆಯನ್ನು ಪರಸ್ಪರ ಪ್ರಕಾಶನ ಪ್ರಕಟಿಸಿರುವ 'ಮಿಶೆಲ್ ಫುಕೋ: ಸತ್ಯ, ಅಧಿಕಾರ ಮತ್ತು ಮುಕ್ತ ಮಾತುಕತೆ' ಕೃತಿ ನೀಗಿಸಿದೆ. ಭಾರತದಲ್ಲಿ ಫುಕೋನ ವಿಚಾರಗಳನ್ನು ಹೇಗೆ ಅನ್ವಯಿಸಬೇಕು ಎನ್ನುವ ಕುರಿತು ಚಿಂತಕ ವಿವೇಕ್ ಧಾರೇಶ್ವರ ನೆರವಾಗುತ್ತಾರೆ. ಈ ಪುಸ್ತಕ ಭಿನ್ನ ಸಂಸ್ಕೃತಿಗಳ ಅಧ್ಯಯನದಲ್ಲಿ ತೊಡಗಿರುವ ಚಿಂತಕರಿಗೆ, ವಸಾಹತು, ವಸಾಹತೋತ್ತರ ಚಿಂತನೆ, ಸಂಸ್ಕೃತಿ ಅಧ್ಯಯನದಲ್ಲಿ ತೊಡಗಿರುವ ಕನ್ನಡ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಈ ಕೃತಿಯು ಉಪಯುಕ್ತವಾಗಿದೆ.

About the Author

ಎ.ಪಿ. ಅಶ್ವಿನ್ ಕುಮಾರ್

ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದ ಅಶ್ವಿನ್ ಕುಮಾರ್‍ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಮಣಿಪಾಲದ ’ಸೆಂಟರ್‍ ಫಾರ್‍ ಸ್ಟಡಿ ಆಫ್ ಕಲ್ಚರ್‍ ಅಂಡ್ ಸೊಸೈಟಿ’ಯಲ್ಲಿ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಪಡೆದರು. ಅಲ್ಲಿಯೇ ಸಂಶೋಧನಾ ಸಂಚಾಲಕರಾಗಿ ವೃತ್ತಿ ಜೀವನ ಆರಂಭಿಸಿದ ಅಶ್ವಿನ್ ಅವರು ನಂತರ ತುಮಕೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿ ಅವರು ಸದ್ಯ ಅಹ್ಮದಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ...

READ MORE

Related Books