'ಹಣವಿದ್ದರೆ ನೀನು ನಿನಗೆ ಕಾಣುವುದಿಲ್ಲ, ಹಣವಿಲ್ಲವಾದರೆ ಊರಿಗೇ ನೀನು ಕಾಣುವುದಿಲ್ಲ' ಎಂಬೊಂದು ಲೋಕೋಕ್ತಿಯಿದೆ. ಐಶ್ವರ್ಯವಂತಿಕೆ ವಿನಾಶದ ಹೆಬ್ಬಾಗಿಲೆಂದೂ, ಅದು ಯಾವಾಗಲೂ ವಿಶಾಲವಾದುದೆಂದೂ, ಆ ಬಾಗಿಲಿಗೆ ಕರೆದೊಯ್ಯುವ ಪಥವೂ ಸಹ ಅಗಲವಾದುದೆಂಬ ಕ್ರೈಸ್ತ ಪ್ರವಾದನೆಯೂ ಉಂಟು. ಭೀಮಸಮುದ್ರದ ಜಿ. ಶಿವಪ್ಪನವರು ಪಿತ್ರಾರ್ಜಿತವಾದ ಧನವಂತಿಕೆ ಹಾಗೂ ದ್ರವ್ಯ ಸಮೃದ್ದಿಯ ನಡುವೆಯೇ ಬೆಳೆದರೂ ಭದ್ರವಾದ ಮಾನವೀಯತೆಯ ಬುನಾದಿಯ ಮೇಲೆ ಬೇರೂರಿದವರು. ತಮ್ಮನ್ನು ತಾವು ಅನ್ವೇಷಿಸಿಕೊಂಡವರು ಹಾಗೂ ನಿತ್ಯ ಅದನ್ನು ಜಾಗೃತವಾಗಿಟ್ಟುಕೊಂಡವರು. ಹೇಗೆ ಬದುಕಬೇಕು ಮತ್ತು ಹೀಗೆ ಬದುಕಲು ಸಾಧ್ಯ ಎಂದು ತೋರಿಸಿಕೊಟ್ಟವರು. ಅಂತಹ ಒಂದು ಹಿರಿಯ ಗಟ್ಟಿ ಜೀವವನ್ನು ಕುರಿತಾಗಿ ನಡೆಸಿದ ಅಕ್ಷರ ಅನುಸಂಧಾನವೇ 'ಮರೆಯಲಾರದ ಮುತ್ಸದ್ದಿ