ಮಂಗಳವೇಡೆ ಶ್ರೀನಿವಾಸರಾಯರು ರವರು ತನ್ನನ್ನು ತಾನೆ ನಖಶಿಖಾಂತ ಕನ್ನಡಿಗನೆಂದು ತಾವೇ ಹೇಳಿಕೊಂಡಿರುವ ಬಲು ಅಪರೂಪದ ಧೀಮಂತ ವ್ಯಕ್ತಿ. ಗಾಂಧೀಜಿಯವರ ಯಂಗ್ ಇಂಡಿಯಾ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಕನ್ನಡಿಗರ ಕೈಗೆಟುಕುವಂತೆ ಮಾಡಿದ್ದಾರೆ. ಇದನ್ನು ಕನ್ನಡಿಗರಿಗೆ ಪರಿಚಯಿಸುವ ಸಲುವಾಗಿ ಕನ್ನಡ ನವಜೀವನ ಪತ್ರಿಕೆ ಹುಟ್ಟುಹಾಕಿದು, ನಂತರ ಕರ್ನಾಟಕ ಏಕೀಕರಣ ಸಭೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಕನ್ನಡ ನಾಡು ಕಟ್ಟುವ ವಿಷಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಮೈಗೂಡಿಸಿಕೊಂಡವರು. ಇವರ ಬದುಕನ್ನು ಕವಿತಾ ಕುಲಕರ್ಣಿ ಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ.