ಮಾಲತಿಯವರ ಬದುಕು ಒಬ್ಬ ಕಲಾವಿದೆಯ ಛಾಯೆಯನ್ನೂ ಮೀರಿ ಸಮಾಜಕ್ಕೆ ಹತ್ತಿರವಾಗುತ್ತದೆ. ರಂಗಭೂಮಿ, ಚಲನಚಿತ್ರ ಮತ್ತು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಮಾಲತಿ ಸರೋಜ್‌ರವರು ತನ್ನೊಳಗೆ ಅನಾಥ ಪ್ರಜ್ಞೆಯನ್ನು ಸದಾಕಾಲ ಸಲಹಿ ಕೊಂಡವರಂತೆ ಕಂಡರೂ ಶೋಷಿತ ಸಮುದಾಯಗಳ ಪರ ಅಪರಾ ಕಾಳಜಿಯನ್ನು ಹೊಂದಿದವರು. ಅದರಲ್ಲೂ ದೇವದಾಸಿ, ಜೋಗತಿ, ಬಸವಿಯಂತಹ ಹೀನ ಆಚರಣೆಗಳಿಗೆ ಬಲಿಯಾದ ಮಹಿಳಾ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಾಲತಿಯವರ ವ್ಯಕ್ತಿತ್ವದ ವಿವಿಧ ಆಯಾಮಗಳು ಮತ್ತು ರಂಗಸಾಧನೆಗಳನ್ನು ಲೇಖಕ ಬಿ. ಶಿವಾನಂದರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಬಿ. ಶಿವಾನಂದ ಅವರು ಬರಹಗಾರರು. ಕೃತಿಗಳು: ಶ್ರೀಮತಿ ಮಾಲತಿ ಸರೋಜ, ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-1, ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-2 ...
READ MORE