ಮಕ್ಕಳ ಮಲಾಲಾ

Author : ಎಲ್.ಎಸ್‌. ಶಾಸ್ತ್ರಿ

Pages 94

₹ 70.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560026
Phone: 080-22107728

Synopsys

ಮಲಾಲಾ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳಿಗಾಗಿ ಕಂದಾಚಾರಿ ಭಯೋತ್ಪಾದಕರ ಎದುರಿಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಧೀಮಂತ ಬಾಲಕಿ. ಚಿಕ್ಕವಯಸ್ಸಿನಲ್ಲಿಯೇ ಆಕೆ ತೋರಿದ ದಿಟ್ಟತನ, ಮಕ್ಕಳ ಶಿಕ್ಷಣದ ಹಕ್ಕುಗಳ ಬಗೆಗಿನ ಪ್ರೇಮ ಮತ್ತು ಶ್ರದ್ಧೆ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಮತಾಂಧರ ಗುಂಡಿನ ದಾಳಿಗೆ ತುತ್ತಾಗಿ ಸಾವಿನಂಚಿಗೆ ಹೋಗಿ ಬದುಕುಳಿದು ಧೈರ್ಯ ಹಾಗೂ ಸಾಹಸಗಳಿಗೆ ಹೆಸರಾದ ಮಲಾಲಾ ಹದಿನೇಳನೇ ವಯಸ್ಸಿಗೇ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಭಾಜನಳಾಗಿದ್ದವಳು. ಈ ಕೃತಿಯು ಮಲಾಲಾ ಳ ಜೀವನ ಸಾಧನೆಯನ್ನು ಒಳಗೊಂಡಿದೆ.

About the Author

ಎಲ್.ಎಸ್‌. ಶಾಸ್ತ್ರಿ

ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರಗಳಲ್ಲಿ 60 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ 78 ವರ್ಷ ವಯಸ್ಸಿನ ಎಲ್. ಎಸ್. ಶಾಸ್ತ್ರಿಯವರ ಜನ್ಮಭೂಮಿ ಉತ್ತರಕನ್ನಡ, ಕರ್ಮಭೂಮಿ ಬೆಳಗಾವಿ,. ಸುಮಾರು 110 ಕೃತಿಗಳು, 40 ಸಾವಿರಕ್ಕೂ ಹೆಚ್ಚು ಬಿಡಿ ಬರೆಹಗಳು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿ ರಚನೆ 15ಕ್ಕೂ ಹೆಚ್ಚು ಸಾಹಿತ್ಯ ಕಲೆ ಪತ್ರಿಕಾ ಸಂಘಟನೆ; ಐದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ಸಂಘಟನೆ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ವಿಶಾಲ ಕರ್ನಾಟಕ, ಲೋಕದರ್ಶನ ಮೊದಲಾದ ಪತ್ರಿಕೆಗಳಲ್ಲಿ ಆರು ದಶಕಗಳ ಸೇವೆ; ಕರ್ನಾಟಕ ಪತ್ರಿಕಾ ಅಕಾಡೆಮಿ, ಕೆಯೂಡಬ್ಯುಜೆ, ಸೂರಿ ಪ್ಸೇರಶಸ್ರಿತಿ, ಪಾಂಡೇಶ್ವರ ಪ್ರಸಶ್ತಿ, ಸಹಿತ 20ಕ್ಕೂ ಹೆಚ್ಚು ಪ್ರಶಸ್ತಿ ...

READ MORE

Related Books