ಮಹಾತ್ಮ ಗಾಂಧಿಯವರ ಮೊಮ್ಮಗಳಾದ ಸುಮಿತ್ರ ಗಾಂಧಿ ಕುಲಕರ್ಣಿ ಅವರು ತಮ್ಮ ತಾತನನ್ನು (ಮಹಾತ್ಮ ಗಾಂಧಿ) ಹತ್ತಿರದಿಂದ ಕಂಡು ಆ ಮೂಲಕ ಈ ಕೃತಿಯನ್ನು ರಚಿಸಿದ್ದಾರೆ. ಮೊದಲ ಭಾಗವಾದ ಇದರಲ್ಲಿ ಗಾಂಧೀಜಿಯವರ ವ್ಯಕ್ತಿತ್ವ, ಕುಟುಂಬದ ಕುರಿತು ನೀಡಲಾಗಿದೆ. ಗಾಂಧಿಯವರ ಪೂರ್ವಜರು, ಗಾಂಧಿಯವರ ವಿದ್ಯಾಭ್ಯಾಸ, ಆಫ್ರಿಕಾದಲ್ಲಿನ ಅವರ ಕಾರ್ಯಗಳು, ಟಾಲ್ಸ್ಟಾಯ್ ಅವರ ಪ್ರಭಾವ, ಗೋಖಲೆಯವರ ಆದರ್ಶ, ಪ್ರಮುಖ ವ್ಯಕ್ತಿಗಳ ವ್ಯಕ್ತಿತ್ವ ಈ ಕೃತಿಯಲ್ಲಿ ಕೊಡಲಾಗಿದೆ.
ಕೃತಿಯ ಕನ್ನಡ ಅನುವಾದಕರು: ಡಾ. ಜೆ.ಎಸ್. ಕುಸುಮಗೀತ ಮತ್ತು ಪ್ರೊ ಬಿ.ವೈ ಲಲಿತಾಂಬ.
ಲೇಖಕಿ, ಅನುವಾದಕಿ ಜೆ.ಎಸ್.ಕುಸುಮ ಗೀತ ಅವರು ಕನ್ನಡ ಹಾಗೂ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ರಾಮಚಂದ್ರ ಶುಕ್ಲ ಪ್ರಶಸ್ತಿ, ಸೌಹಾರ್ದ ಸಮ್ಮಾನ್, ವಿಶಿಷ್ಟ ಹಿಂದಿ ಸೇವೆ ಸಮ್ಮಾನ್, ವಿದ್ಯಾಸಾಗರ್ ಸಾರಸ್ವತ ಸಮ್ಮಾನ್, ಸಾಹಿತ್ಯ ಸೇವಾ ಸಮ್ಮಾನ್, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ, ಸಾಹಿತ್ಯ ವಾಚಸ್ಪತಿ, ಹಿಂದಿ ಶಿಖರ್ ಸಮ್ಮಾನ್, ಗಾರ್ಗಿ ಗುಪ್ತ ದ್ವಿವಾಗೀಶ್ ಮುಂತಾದ ಪ್ರಶಸ್ತಿಗಳು ಸಂದಿವೆ. ಕೃತಿಗಳು: ಮಹಾತ್ಮಗಾಂಧಿ ನನ್ನ ತಾತ, ಭಾಗ-1, ಒಂದು ಅರ್ಥಪೂರ್ಣ ಸತ್ಯ, ಅಂತಿಮ ಜ್ವಾಲೆ (ಕಾದಂಬರಿ ಅನುವಾದ) ...
READ MORE