ಕೂಡಲಿ ಚಿದಂಬರಂ ರವರು ಕಾವ್ಯಾಲಯ ಪ್ರಕಟಣಾ ಸಂಸ್ಥೆಯನ್ನು ಕಟ್ಟುದರ ಮುಖಾಂತರ ಶ್ರೇಷ್ಠ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಕನ್ನಡ ಸಾರಸ್ವತ ಲೋಕ ಅಭಿವೃದ್ಧಿಪಡಿಸೂದರ ಜೊತೆಗ ಭದ್ರಪಡಿಸಿದರು. ಕನ್ನಡ ಸಾಹಿತ್ಯ ಸಂಸ್ಕೃತಿ ಬಗೆಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಇದನ್ನು ಸಾಕಾರಗೊಳಿಸುವಲ್ಲಿ ಇವರು ಮೆರೆದ ಗ್ರಂಥ ಸಾಹಸ ನಿಜಕ್ಕೂ ಪ್ರಶಂಸನೀಯವಾದುದು. ಕುವೆಂಪು ಮತ್ತು ದೇವಂಗಿ ಮಾನಪ್ಪನವರ ಪ್ರೋತ್ಸಾಹದಿಂದ ಶಿವಮೊಗ್ಗದಲ್ಲಿ ಹವ್ಯಾಸಿ ಪ್ರಕಾಶಕರಾಗಿ ಪುಸ್ತಕೋದ್ಯಮಕ್ಕೆ ಕಾಲಿಟ್ಟ ಕೂಡಲಿ ಚಿದಂಬರಂರವರ ಬದುಕನ್ನು ದೊರೆಸ್ವಾಮಿಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರು ಚಾಮರಾಜನಗರ ಜಿಲ್ಲೆಯ ಹೊರೆಯಾಲ ಗ್ರಾಮದಲ್ಲಿ 1946 ಡಿಸೆಂಬರ್ 31ರಂದು ಜನಿಸಿದರು. ಹುಯಿಲಾಳ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಆರಂಭಿಸಿದರು. ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ವಿಚಾರವಾದಿ ಚಳವಳಿ, ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದ ಇವರು ೩೧-೧೨-೧೯೪೬ರಲ್ಲಿ ಹುಟ್ಟಿ, ಹುಯಿಲಾಳ ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಮೈಸೂರು ವಿ.ವಿ.ಯಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ೧೦ ವರ್ಷಗಳ ನಂತರ ಈ ವತಿಯಿಂದ ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ಮಾರಾಟ, ವಿಚಾರವಾದಿ ಚಳುವಳಿ, ದಲಿತ ಚಳುವಳಿ ಮುಂತಾದ ಪದ್ಧತಿಗಳಲ್ಲಿ ...
READ MORE