ಲೇಖಕ ಬಿ. ಪ್ರಭಾಕರ ಶಿಶಿಲ ಅವರ ಸಂಶೋಧನಾ ಆಧಾರಿತ ಕೃತಿ ಕೊಡಗು-ಕೆನರಾ ರೈತ ಬಂಡಾಯ-1837. 1837ರಲ್ಲಿ ಬ್ರಿಟೀಷರ ವಿರುದ್ಧ ಕನ್ನಡ ಮ್ತು ಕೊಡಗು ಜಿಲ್ಲೆಯ ರೈತರು ದೊಡ್ಡ ರೀತಿಯಲ್ಲಿ ಬಂಡೆದ್ದರು. ಮಂಗಳೂರನ್ನು ವಶಪಡಿಸಿ ಎರಡು ವಾರಗಳ ಪರ್ಯಂತ ಆಡಳಿತ ನಡೆಸಿದರು. ಬಳಿಕ ಬ್ರಿಟೀಷರ ಒಡೆದು ಆಳುವ ನೀತಿಗೆ ಬಲಿಯಾಗಿ ಸೋಲುಂಡರು. ಈ ಘಟನೆಗೆ ಅಮರ ಸುಳ್ಯದ ಸ್ವಾತಂತ್ಯ್ರ, ಕೊಡಗು ಕೆನರಾ ಬಂಡಾಯ, ಕಲ್ಯಾಣಪ್ಪನ ಕಾಟಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಇದರ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿ, ಈ ಕೃತಿಯನ್ನು ರಚಿಸಲಾಗಿದೆ.
©2024 Book Brahma Private Limited.