ಖಾದ್ರಿ ಶಾಮಣ್ಣ ರವರು , ಸ್ವಾತಂತ್ರ್ಯ, ಸಮಾನತೆ, ಗಾಂಧಿವಾದ, ಸರ್ವೋದಯ ತತ್ವಗಳ ಸಾಕಾರ ಮೂರ್ತಿಯಂತಿದ್ದ ಬಹುಮುಖ ವ್ಯಕ್ತಿತ್ವದ ಮೂಲಕ ಖ್ಯಾತರಾದವರು. ಇವರು ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದವರು. ಕಾಗೋಡು ಸತ್ಯಾಗ್ರಹ, ಗೋಕಾಕ ಚಳುವಳಿಗಳ ಪ್ರಮುಖ ರೂಪವಾಗಿದ್ದ ಇವರು , ಕರ್ನಾಟಕದ ಏಕೀರಣದ ಸಂದರ್ಭದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕದ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ ಇವರ ಬದುಕನ್ನು,ಜೀವನ ಸಾಧನೆಯನ್ನು ಹೆಚ್.ಆರ್. ಶ್ರೀಶ ರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.