ಕರ್ನಾಟಕ ಜನಜೀವನ -ಕೃತಿಯು ನೈಜ ಅರ್ಥದಲ್ಲಿ ಒಂದು ಸಂಶೋಧನ ಗ್ರಂಥ. ಕೃತಿಯ ಒಟ್ಟು ಸಾರವನ್ನುಮೂರು ಪ್ರಮುಖ ವಿಭಾಗಗಳನ್ನಾಗಿಸಿದೆ. ಒಂದು-ಕನ್ನಡಿಗರ ಕೋಟೆ ಗಾಳೆಗ, ಕನಕದಾಸರು ಕಂಡ ವಿಜಯನಗರ ಹಾಗೂ ಚಾರಣಕವಿ ಗೋವಿಂದ ವೈದ್ಯ. ಕನ್ನಡಿಗರು ಕೋಟೆಗಾಳೆಗ ವಿಭಾಗದಲ್ಲಿ ಕೋಟೆ-ಕೊತ್ತಲಗಳು, ಅವಶ್ಯಕತೆ, ಕೋಟೆಗಳ ವಿವಿಧ ಪ್ರಕಾರಗಳು, ವಸ್ತು ಕ ವರ್ಣಕ ಗಳಲ್ಲಿಯ ವಾಸ್ತವತೆ, ಕೋಟೆಗಾಳೆಗಕ್ಕೆ ಮೊದಲು, ಪಾಳೆಯ ಸಂರಕ್ಷಕ ಸಾಧನೆಗಳು (ಫಿರಂಗಿ-ತುಬಾಕಿಗಳು ಇತ್ಯಾದಿ), ಪರಿಭಾಷಾ ಸ್ಪಷ್ಟೀಕರಣ (ಹುಲಿಮೊಗ, ಕುದುರೆಗುಂಡಿ ಇತ್ಯಾದಿ), ಎರಡನೇ ವಿಭಾಗ-ಕನಕದಾಸರು ಕಂಡ ವಿಜಯನಗರದಲ್ಲಿ-ಕನಕ ದಾಸರ ಸಾಹಿತ್ಯದ ಹಾಗೂ ಜನಜೀವನ ವೈಶಿಷ್ಟ್ಯ, ಕನಕದಾಸ-ವಿಜಯನಗರ ಸಂಬಂಧ ಇತ್ಯಾದಿ, ಚಾರಣ ಕವಿ ಗೋವಿಂದ ವೈದ್ಯ ವಿಭಾಗದಲ್ಲಿ ಚಾರಣ ಸಾಹಿತ್ಯ ಮೀಮಾಂಸೆ, ಕಂಠೀರವ ನರಸರಾಜ ವಿಜಯ ವಿಚಾರ, ಕರ್ನಾಟಕಕ್ಕೆ ಖಾನರು ಬಂದದ್ದು, ಕನ್ನಡಿಗರ ಸಮರ ಜೀವನಚಿತ್ರ, ಕಗ್ಗೊಲೆಯ ಕಾಳೆಗದ ಕಥೆ, ಊಟ-ಉಡುಗೆ-ತೊಡುಗೆಗಳು ಇತ್ಯಾದಿ ಸವಿಸ್ತಾರವಾಗಿ ಚರ್ಚಿಸಲಾಗಿದೆ.
ಈ ಕೃತಿಗೆ ಮುನ್ನುಡಿ ಬರೆದ ವಿದ್ವಾಂಸ ಆರ್.ವಿ. ಜಾಗಿರದಾರ, ಸಂಶೋಧನೆಯು ಕುತೂಹಲದಲ್ಲಿ ಹುಟ್ಟಿ, ಜ್ಞಾನದಲ್ಲಿ ಪರ್ಯವಸಾನ ಹೊಂದುವ ನೈಸರ್ಗಿಕ ಅರ್ಥಾತ್ ಪ್ರಾಮಾಣಿಕ ವೃತ್ತಿ. ಅದರ ಎಲ್ಲ ಲಕ್ಷಣಗಳು ಬೆಟಗೇರಿ ಕೃಷ್ಣಶರ್ಮರ ದೃಷ್ಟಿಯಲ್ಲಿವೆ. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ನಮ್ಮ ಲಕ್ಷಕ್ಕೆ ತಂದುಕೊಡುವ ಪ್ರಚೋದಕಗಳು ಇಲ್ಲಿ ಸಾಕಷ್ಟಿವೆ ಎಂದು ಪ್ರಶಂಸಿದ್ದಾರೆ.
©2024 Book Brahma Private Limited.