ಕೆ. ಎಸ್. ಅಶ್ವಥ್ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಕಲಾವಿದ. ಚಿತ್ರರಂಗದ ಒಳಗೂ ಹೊರಗೂ ಸರಳ ಸಜ್ಜನ ಎನಿಸಿ ಎಲ್ಲರಿಗೂ ಆಪ್ತವಾಗಿದ್ದರು ಅಶ್ವಥ್. ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಅಶ್ವಥ್ ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಸದಾ ಹಸಿರು. ಅವರ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರದ ಹತ್ತು ಹಲವು ಸಂಗತಿಗಳನ್ನು ಈ ಕೃತಿ ಪರಿಚಯಿಸುತ್ತದೆ.
ಸ. ಹರೀಶ್ ಅವರು ಬೆಂಗಳೂರಿನವರು. ಚಲನಚಿತ್ರ ನಿರ್ದೇಶಕರು, ಟೀವಿ ಧಾರಾವಾಹಿ ಲೇಖಕರು ಹಾಗೂ ಕಾದಂಬರಿಕಾರರು ಹಾಗೂ ಚಲನಚಿತ್ರ ನಿರ್ಮಾಪಕರು. ಕನ್ನಡದಲ್ಲಿ ಎಂ.ಎ ಪದವಿ ಹಾಗೂ ಡಿ.ಫಾರ್ಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. 1970 ಜುಲೈ 18ರಂದು ಜನನ. ಕನ್ನಡದ ಹೆಸರಾಂತ ನಿಯತಕಾಲಿಕೆಗಳಾದ ಪ್ರಜಾವಾಣಿ, ಸುಧಾ, ವಾರಪತ್ರಿಕೆ, ಪ್ರಜಾಮತ, ಮಂಗಳ ಮುಂತಾದ ಪತ್ರಿಕೆಗಳಿಗೆ ಸಣ್ಣಕತೆ, ಕವನ ಮತ್ತು ಕಾದಂಬರಿ ಬರೆದಿದ್ದಾರೆ. ನ್ಯಾಯಿಗೆರೆ ಹಾಗೂ ಧನ್ಯವಾದ ಚಲನಚಿತ್ರಗಳ ನಿರ್ದೇಶನ, ಮಾಯಾಬಜಾರ್, ಪಾಪಿಗಳ ಲೋಕದಲ್ಲಿ, ನೀ ಮುಡಿದ ಮಲ್ಲಿಗೆ, ನಾನೇ ರಾಜ ಇತ್ಯಾದಿ ಚಲನಚಿತ್ರಗಳಿಗೆ ಗೀತೆಯ ರಚನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ. ವಾರ್ತಾ ಇಲಾಖೆ, ...
READ MORE