ಹಸ್ತಪ್ರತಿ ಅಧ್ಯಯನ, ಕರಾರುವಕ್ಕಾದ ವಿಶ್ಲೇಷಣೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆ ಎಂಬಂತಿದೆ ಈ ಕೃತಿ. ಡಾ. ಎಂ.ಎಂ. ಕಲಬುರ್ಗಿ ಕೃತಿಯ ಪ್ರಧಾನ ಸಂಪಾದಕರು. ಗ್ರಂಥ ರಚನೆಯಲ್ಲಿ ವೀರಣ್ಣ ರಾಜೂರ ಅವರ ಶ್ರಮವನ್ನೂ ಮರೆಯುವಂತಿಲ್ಲ. ಬಹುತೇಕ ನನೆಗುದಿಗೆ ಬಿದ್ದಿದ್ದ ಹಸ್ತಪ್ರತಿ ಅಧ್ಯಯನ ಕಾರ್ಯಕ್ಕೆ ಮತ್ತೆ ಜೀವ ಒದಗಿಸಿದ ಹಿನ್ನೆಲೆಯೂ ಕೃತಿಗೆ ಇದೆ. ಸಂಸ್ಕೃತ ಹಸ್ತಪ್ರತಿಗಳಿಗೆ ಬದಲು ಕನ್ನಡ ಹಸ್ತಪ್ರತಿಗಳಿಗೆ ಆದ್ಯತೆ ನೀಡಿದ್ದರಿಂದ 6 ರಿಂದ ೧೦ನೇ ಸಂಪುಟದವರೆಗಿನ ಐದು ಸಂಪುಟಗಳು ಮೊದಲು ಪ್ರಕಟಗೊಂಡವು.
©2024 Book Brahma Private Limited.