ಕನಕದಾಸರು ಕಲಿಯೂ, ಕವಿಯೂ ಆಗಿದ್ದವರು. ದಾಸರಲ್ಲಿ ಕವಿ ಕವಿಗಳಲ್ಲಿ ದಾಸರಾಗಿ ಯಾವುದೇ ಒಂದು ಜಾತಿ, ಮತ ಪಂಥಕ್ಕೆ ಸೀಮಿತಗೊಳ್ಳದ ಇವರು ದಾಸ, ಭಕ್ತ, ದಾಸಶ್ರೇಷ್ಠ, ಸಮತ, ಮಹಾತ್ಮ, ಮಹಾಮಾನವತವಾದಿ, ಸಾಮಾಜಿಕ ಚಿಂತಕ, ಚೈಚಾರಿಕತೆಯ ಹರಿಕಾರ, ದಾರ್ಶನಿಕ ಕನಕದಾಸರೆಂದು ಜನಮನದಲ್ಲಿ ನೆಲೆ ನಿಂತಿದ್ದಾರೆ. ಹೋರಾಟದಿಂದ ಕೂಡಿದ ಅವರ ಆದರ್ಶ ಬದುಕು ಹಾಗೂ ಸಾಮಾಜಿಕ, ಧಾರ್ಮಿಕ, ವೈಚಾರಿಕ ಚಿಂತನೆಗಳಿಂದ ಕೂಡಿದ ಅವರ ಸಾಹಿತ್ಯ ವರ್ಗ ಬೇಧಗಳಿಲ್ಲದ ಅವರ ಹೊಸ ಸಮಾಜ ಪರಿಕಲ್ಪನೆಯ ಚಿಂತನೆಗಳು ಮುಂದಿನ ತಲೆಮಾರುಗಳಿಗೆ ಅವಶ್ಯವೆಂದರಿತ ಸಿದ್ದಣ್ಣ ಎಫ್.ಜಕಬಾಳ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.