`ಕಗ್ಗ ಕಾಲಂ’ ನಾಗೇಶ್ ಜೆ. ನಾಯಕ ಅವರ ಅಂಕಣ ಬರಹವಾಗಿದೆ. ಇದಕ್ಕೆ ಎ ಎಸ್. ಮಕಾನದಾರ ಅವರ ಬೆನ್ನುಡಿ ಬರಹವಿದೆ; 'ಕಗ್ಗ ಕಾಲಂ' ಕೃತಿಯಲ್ಲಿ ಕಗ್ಗದ 49 ವಿಷಯ ವೈವಿಧ್ಯ ದ್ರಾಕ್ಷಿ ಗೊಂಚಲಿವೆ. ಈ ಥರಹೇವಾರಿ ಬದುಕಿನಲಿ, ಆಸೆಯೆಂಬ ಬಿಸಿಲುಗುದುರೆ, ಜಗವೆಲ್ಲ ನಗುತಿರಲಿ, ಕುಲದ ನೆಲೆ, ತಪ್ಪಿನ ಅರಿವು, ಹಳೇ ಬೇರು-ಹೊಸ ಚಿಗುರು, ನೋವು ನಗಿಸುವ ಕಲೆ, ಹುಸಿನಗುತ ಬಂದೇವ, ಲೋಕದ ಭಿನ್ನ ನಿಲುವು, ಅಲ್ಲಿರುವುದು ನಮ್ಮ ಮನೆ ಹೀಗೆ ಅನೇಕ ನಮ್ಮೊಳ ಮನಸ್ಸಿನ ಮಾತುಗಳನು ಆಪ್ತಸಖಿಯ ಮುಂದೆ ಪಿಸುಗುಟ್ಟಿದಂತಿವೆ. ನಕಾರಾತ್ಮಕ ಆಲೋಚನೆಗಳಿಗೆ ಇಂಬುಗೊಡದೆ, ಸಕಾರಾತ್ಮಕ ನಿಲುವಿಗೆ ಸ್ಪಂದಿಸಿ, ಕವಿದ ಮಂಕು ಕಳೆದು, ಅರಿವಿನ ದೀವಿಗೆಗಳನ್ನು ಹೊತ್ತಿಸಿದ ಕವಿಮಿತ್ರ ನಾಗೇಶ್ ನಾಯಕರ ಲೇಖನಗಳಲ್ಲಿ ಜೀವಂತಿಕೆಯನ್ನು ಕಾಣಬಹುದು. ಇವರ ಪದ್ಯದ ನಡುಗೆಯಂತೆ ಗದ್ಯದ ನಡುಗೆಯೂ ಚೆಂದವೆ. ಓದಿ ಆಸ್ವಾದಿಸುವ ತವಕ ಖಂಡಿತ ಸಾರಸ್ವತ ಲೋಕಕ್ಕಿದೆ. 'ಕಗ್ಗ' ಸಂಕೀರ್ಣ ಬದುಕಿನ ಕಗ್ಗಂಟು ಬಿಚ್ಚಲಿ.
©2024 Book Brahma Private Limited.