ಉತ್ತರ ಕರ್ನಾಟಕದಲ್ಲಿ ತನ್ನ ಗೀಗೀ ಪದಗಳ ಹಾಡುಗಾರಿಕೆಯಿಂದ ಮನೆ ಮಾತಾಗಿದ್ದ ಕಡಣಿಯ ಕಲ್ಲಪ್ಪರವರು ಕನ್ನಡ ಕಟ್ಟುವ ಕಾಯಕದ ಅರಿವಿಲ್ಲದೇ ಕನ್ನಡವನ್ನು ದೇಸಿ ಸೊಗಡಿನಲ್ಲಿ ಗಟ್ಟಿಯಾಗಿ ನೆಲೆನಿಲ್ಲಿಸಿದವರು. ಗೀಗೀ ಪದಗಳ ಹಾಡುಗಾರರಾದ ಇವರು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಇವರ ಹಾಡುಗಾರಿಕೆಯಲ್ಲಿ ಸಮಾಜ ಸುಧಾರಣೆ, ಶರಣರ ಜೀವನ ಚರಿತ್ರೆ, ಸ್ವಾತಂತ್ರ್ಯ ಚಳವಳಿ ಮತ್ತು ಆಧುನಿಕತೆಯ ವಿಡಂಬನೆಗಳು ಪ್ರಮುಖವಾಗಿ ಗೋಚರಿಸುತ್ತಿದ್ದದೆ. ಇವರ ಬದುಕು, ಜೀವನ ಸಾಧನೆಯನ್ನು ಲೇಖಕಿ ಸರ್ವಮಂಗಳಾ ದೇವಿ ಕಿ.ಬಾಂದೇಕರರು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.