`ಕಾಡುವ ಕವಿತೆ’ ನಾಗೇಶ್ ಜೆ. ನಾಯಕ ಅವರ ಅಂಕಣ ಬರಹವಾಗಿದೆ. ಇದಕ್ಕೆ ಕೆ. ಷರೀಫಾ ಅವರ ಬೆನ್ನುಡಿ ಬರಹವಿದೆ ಕೃತಿಯ ಕುರಿತು ಬರೆಯುತ್ತಾ 'ನಾಗೇಶ್ ಜೆ. ನಾಯಕ ಅವರ ಅಂಕಣ ಬರಹಗಳ "ಕಾಡುವ ಕವಿತೆ" ಕೃತಿಯಲ್ಲಿ ಸುಮಾರು 50 ಕವಿಗಳ ಕವಿತೆಗಳನ್ನು ವಿಶ್ಲೇಷಿಸಿದ್ದಾರೆ. ಕಾವ್ಯವೆಂದರೆ ಅದು ವಾಸ್ತವದ ಬದುಕಿನಿಂದ ಭಿನ್ನ ಅಲ್ಲ. ನಮ್ಮ ಕಾವ್ಯ ನಮ್ಮ ಸುಖ ದು:ಖದಲ್ಲಿ ಸಾಥ್ ನೀಡುತ್ತದೆ. ನಮ್ಮ ಮನದಾಳದ ತುಮುಲಗಳಿಗೆ, ಸಂಕಟಗಳಿಗೆ ಹೊರರೂಪವಾಗಿ ಕಾವ್ಯ ಸೃಜಿಸುತ್ತೇವೆ. ಇಲ್ಲಿ ನಾಯಕರು ತಾವು ಇಷ್ಟಪಡುವ ಹಿರಿ ಕಿರಿಯ ಕವಿಗಳ ಕಾವ್ಯವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುತ್ತಾರೆ. ಇಲ್ಲಿಯ ಎಲ್ಲ ಕವಿಗಳ ಆತ್ಮವನ್ನು ಅವರ ಕಾವ್ಯದ ಮೂಲಕ ಮಾತ್ರ ಜಾಲಾಡದೇ ಅದನ್ನು ಅವರ ಲೋಕಾನುಭವದ ಆಧಾರದ ಮೇಲೆ ಅನುಸಂಧಾನ ನಡೆಸುವ ರೀತಿ ಮೆಚ್ಚುಗೆ ಪಡೆಯುತ್ತದೆ. ಕವಿಯ ಕಾವ್ಯದ ಅಂತರಂಗ ಬಹಿರಂಗವನ್ನು ಜಾಲಾಡುತ್ತಾ ವಾಸ್ತವದ ನೆಲೆಗೆ ಕವಿಯನ್ನೂ ಕವಿಯ ಕಾವ್ಯವನ್ನೂ ತಂದು ನಿಲ್ಲಿಸುವುದು ಇವರ ಕಾವ್ಯ ವಿಮರ್ಶೆಯ ಹೆಚ್ಚುಗಾರಿಕೆಯಾಗಿದೆ. ಹಿರಿಯ ಕವಿಗಳಾದ ಸತೀಶ್ ಕುಲಕರ್ಣಿ, ಲಲಿತಾನಾಯಕ್, ಸತ್ಯಾನಂದ ಪಾತ್ರೋಟ, ಬೆಸಗರಹಳ್ಳಿ ರಾಮಣ್ಣ, ಎಸ್. ಜಿ. ಸಿದ್ಧರಾಮಯ್ಯ, ಪೀರ್ಬಾಷಾ, ನನ್ನ ಹಾಗೂ ಬಸು ಬೇವಿನಗಿಡದ ಹಾಗೂ ಆರೀಫ್ರಾಜಾ ಇವರ ಕವಿತೆಗಳನ್ನು ವಸ್ತುನಿಷ್ಟವಾಗಿ ವಿಮರ್ಶಿಸಿರುವ ಇವರ ಪ್ರತಿಭೆ ಅಸಾಧಾರಣವಾದುದು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು' ಎಂದಿದ್ದಾರೆ.
©2024 Book Brahma Private Limited.