2016 ನೇ ಸಾಲಿನ ಕೆ.ಎಸ್. ನರಸಿಂಹಸ್ವಾಮಿ ಪ್ರಶಸ್ತಿ ಪುರಸ್ಕೃತರಾದ ನಾಡಿನ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಅವರನ್ನು ಕುರಿತ ’ಕೆ.ಎಸ್. ನಿಸಾರ್ ಅಹಮದ್ ನಾಡಿಗೆ ಹತ್ತಿರ ಇನ್ನಷ್ಟು ಎತ್ತರ’ ಪುಸ್ತಕ ಅವರ ಸಂಪೂರ್ಣ ಪರಿಚಯಾತ್ಮಕ ಚಿತ್ರಣವನ್ನು ನೀಡುವಂಥದ್ದು. ಕವಯತ್ರಿ, ಬರಹಗಾರ್ತಿ ಪಿ. ಚಂದ್ರಿಕಾ ಅವರು ನಿಸಾರ್ ಅಹಮದ್ ಅವರ ಜೀವನ ಚಿತ್ರವನ್ನು, ಸಾಹಿತ್ಯದ ಕೊಡುಗೆಯನ್ನು ಮಾಹಿತಿಪೂರ್ಣವಾಗಿ ನೀಡಿದ್ದಾರೆ.
ನಿಸಾರ್ ಅವರ ಕಾವ್ಯ ರಚನೆಯ ಹಿನ್ನೆಲೆಯಲ್ಲಿ ಕುರಿತಾದ ಮಾತುಕತೆಗಳನ್ನು ಸಂದರ್ಶನ ಮಾದರಿಯಲ್ಲಿ ಹೊರತರಲಾಗಿದೆ. ನಿಸಾರ್ ಅಹಮದ್ ಅವರ ನಿಲುವಿನ ಕೆಲವು ಸಾಹಿತ್ಯದ ಮಾತುಕತೆಗಳು, ಸೃಜನಶೀಲತೆ ಬಗ್ಗೆ ಅವರಿಗಿರುವ ಅನಿಸಿಕೆ, ಅನುಭವಗಳ ಭಿತ್ತಿಯನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ನಿಸಾರ್ ಅವರ ಮರೆಯಲಾಗದ ಅನೇಕ ಕವಿತೆಗಳಲ್ಲಿನ ಕೆಲವು ಸಾಲುಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಅವರ ಜೀವನ - ಸಾಧನೆ, ವ್ಯಕ್ತಿತ್ವವನ್ನೂ ಈ ಪುಸ್ತಕ ವಿವರಣಾತ್ಮಕವಾಗಿಯೂ, ಮಾಹಿತಿಪೂರ್ಣವಾಗಿಯೂ ನೀಡಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...
READ MORE