ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಪ್ರಮುಖ ಮಹತ್ವದ ಲೇಖಕರು. ಕನ್ನಡ ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿದದ ಇವರು ಕನ್ನಡ ಕಟ್ಟಿದ ಧೀಮಂತರು. ನಾಟಕ, ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದರು ಮಾತ್ರವಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿ ಬೆಳೆಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕೂಡ ಅಪಾರ ಸೇವೆಗಳನ್ನು ನೀಡಿದ್ದಾರೆ. ಶ್ರೀಯುತರ ಪ್ರತಿಭೆಯ ಸೇವೆಯ ಬಗ್ಗೆ ಡಾ. ಶಂಭು ಬಳಿಗಾರ ರವರು ಈ ಕೃತಿಯಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿದ್ದಾರೆ.