ಗಡಿನಾಡಿನ ಸಿಂಹಿಣಿ ಎಂದೇ ಖ್ಯಾತಿಯಾಗಿದ್ದ, ಗಡಿನಾಡ ಕನ್ನಡದ ಸಮಸ್ಯೆಯ ಸೂಕ್ಷ್ಮತೆಯನ್ನು ಮೊದಲೇ ಅರಿತಿದ್ದ ಜಯದೇವಿತಾಯಿ ಲಿಗಾಡೆಯವರು ಅಖಂಡ ಕರ್ನಾಟಕದ ಸಲುವಾಗಿ ಸ್ವಾತಂತ್ರ್ಯ ಪೂರ್ವದಲ್ಲೇ ಕನ್ನಡ ಪರ ಹೋರಾಟಕ್ಕೆ ಧುಮುಕಿದವರು. ಇವರ ಉತ್ಸಾಹ, ಸಾಹಿತ್ಯಸೇವೆ, ಕತೃತ್ವ ಶಕ್ತಿ ಅಪಾರವಾದುದು. ಕನ್ನಡದ ಹೊರತಾದ ಭಾಷೆ ಮಾತಾಡುತ್ತಿದ್ದ ಕನ್ನಡಿಗರನ್ನು ಎಚ್ಚರಿಸಿದ ಇವರು ಸೊಲ್ಲಾಪುರದಲ್ಲಿ ಕನ್ನಡದ ಕೋಟೆ ಕಟ್ಟಿ ಕೀರ್ತಿ ಪತಾಕೆಯನ್ನು ಹಾರಾಡಿಸಿದರು. ಜಯದೇವಿತಾಯಿ ಲಿಗಾಡೆಯವರ ಬದುಕನ್ನು, ಜೀವನ ಸಾಧನೆಯನ್ನು ಲೇಖಕ ಸೋಮನಾಥ ಯಾಳವಾರರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಡಾ.ಸೋಮನಾಥ ಯಾಳವಾರ ಅವರ ಹುಟ್ಟೂರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ. ತಂದೆ ಸಿದ್ದಪ್ಪ ತಾಯಿ ಶಿವಾನಂದಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ತಾರಾನಾಳ ಹಾಗೂ ಡಾವಳಗಿಯಲ್ಲಿ ಪ್ರೌಢಶಿಕ್ಷಣ, ಮುದ್ದೇಬಿಹಾಳದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿ.ವಿ.ಯಿಂದ ಎಂ.ಎ ಪಡೆದರು. 1976ರಲ್ಲಿ ಭಾಷಾ ಶಾಸ್ತ್ರದಲ್ಲಿ ಡಿಪ್ಲೊಮ ಪದವಿ ಮುಗಿಸಿದರು. ಧಾರವಾಡದ ಮುರುಘಾಮಠವು ಇವರಿಗೆ ಧಾರ್ಮಿಕ -ಅಧ್ಯಾತ್ಮಿಕ ಶಿಕ್ಷಣ ನೀಡಿತು. 1995ರಲ್ಲಿ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ (1995) ಪದವಿ ಪಡೆದರು. ಕೆಲವು ವರುಷ ಕಾಲ ಆಲಮಟ್ಟಿ ಆಣೆಕಟ್ಟು ನಿಯಂತ್ರಣ ವಿಭಾಗದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು.ತದನಂತರ ಹುಮನಾಬಾದ ತಾಲೂಕಿನ ಬಸವತೀರ್ಥ ಚೆನ್ನಬಸವ ಸ್ವಾಮೀಜಿ ಕಲಾ ...
READ MORE