ಪಂಡಿತ್ ಜವಹರಲಾಲ್ನೆಹರು ಅವರ ಜೀವನದ ಕುರಿತು ಮಾಹಿತಿ ನೀಡುವ ಕೃತಿ. ನೆಹರು ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರೂ, ಮಹಾನ್ ದೇಶಭಕ್ತರೂ, ಪ್ರಥಮ ಪ್ರಧಾನಿಗಳು, ಪ್ರಭಾವಪೂರ್ಣ ಲೇಖಕರೂ ಆಗಿದ್ದರು. ನೆಹರು ಭಾರತವನ್ನು ಆಳಿದ 17 ವರ್ಷಗಳು ನೆಹರು ಶಕೆ ಎಂದೇ ಖ್ಯಾತಿ. ನೆಹರು ಮಕ್ಕಳ ಪ್ರಿಯರಾಗಿ ಅವರ ಹುಟ್ಟುಹಬ್ಬವನ್ನು ಭಾರತದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ನೆಹರು ಜನ್ಮ ಶತಮಾನೋತ್ಸವವನ್ನು ಭಾರತ ಸಡಗರ ಸಂಭ್ರಮಗಳಿಂದ ಆಚರಿಸುತ್ತದೆ.
ನೆಹರು ತಮಗನಿಸಿದ್ದನ್ನು ನೇರ ಹೇಳುವ ಪ್ರವೃತ್ತಿಯವರಾಗಿದ್ದರು. ಗಾಂಧೀಜಿಯವರ ಪಟ್ಟ ಶಿಷ್ಯರಾಗಿದ್ದ ನೆಹರು, ಗಾಂಧಿಯವರು ಹೇಳಿದುದರಲ್ಲಿ ತಪ್ಪು ಇದ್ದರೆ ಟೀಕಿಸದೆ ಇರುತ್ತಿರಲಿಲ್ಲ. ಅವರಿಗೆ ವಿಷಯಗಳು ಮುಖ್ಯವಾಗುತ್ತಿದ್ದವು. ಸಮಾಜವಾದವನ್ನು ಸ್ವೀಕರಿಸಿದ್ದ ಅವರು ಭಾರತದ ಪುನರ್ನಿರ್ಮಾಣಕ್ಕೆ ಅವಿರತ ಶ್ರಮಿಸಿದರು. ಆರಾಮ್ ಹರಾಮ್ ಹೈ ಎನ್ನುತ್ತಿದ್ದ ಅವರು ಅದಕ್ಕೆ ಉದಾಹರಣೆಯಾಗಿ ದಿನವೂ 18 ಗಂಟೆಗಳು ಕೆಲಸ ಮಾಡುತ್ತಿದ್ದರು. ಅವರ ಜೀವನ ಆದರ್ಶಗಳಿಂದ ಕೂಡಿದ್ದಿತು. ತಮಗಾದ ನೋವುಗಳನ್ನು ನುಂಗಿಕೊಂಡು ದೇಶ ಹಾಗೂ ವಿಶ್ವದ ಶಾಂತಿ ಬಯಸಿದರು. ಅಂತಹ ಸಾಧಕರ ಕುರಿತಾದ ಮಾಹಿತಿಯನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವ ನಿಟ್ಟಿನಿಂದಾಗಿ ಬೆ.ಗೋ. ರಮೇಶ್ ಅವರು ಈ ಕೃತಿಯನ್ನ ರಚಿಸಿದ್ದಾರೆ.
©2024 Book Brahma Private Limited.