ಅಧಿಕಾರವೆಂಬ ಹೊನ್ನ ಶೂಲಕ್ಕೇರದೇ ಜನಸೇವೆಗಾಗಿ ಅದನ್ನು ಬಳಸಿಕೊಂಡು, ತಮ್ಮ ತತ್ವಕ್ಕೆ ಅನುಗುಣವಾಗಿ ಕೆಲಸ ಮಾಡಲಾಗಲಿಲ್ಲವೆಂದು ಸಚಿವೆ ಸ್ಥಾನಕ್ಕೆ ರಾಜೀನಾಮೆಯಿತ್ತ ಅಪರೂಪದ ಮುಂದಾಳ್ತಿಯರಲ್ಲಿ ಕರ್ನಾಟಕದ ಯಶೋಧರಾ ದಾಸಪ್ಪ ಮುಖ್ಯರಾದವರು. ಅವರು ಸಾರಾಯಿ ನಿಷೇಧಿಸಲು ಸರ್ಕಾರ ಸಿದ್ಧವಿಲ್ಲವೆಂದು ರಾಜೀನಾಮೆ ನೀಡಿದವರು. ಚುನಾವಣೆಯಲ್ಲಿ ಮೈಸೂರಿನ ನ್ಯಾಯವಿಧಾಯಕ ಸಭೆಗೆ ಆಯ್ಕೆಯಾದ ಮೊದಲ ಮಹಿಳೆ, ಕರ್ನಾಟಕದ ಮೊತ್ತಮೊದಲ ಕ್ಯಾಬಿನೆಟ್ ಸಚಿವೆ, ಮೊದಲ ಕೆಪಿಸಿಸಿ ಅಧ್ಯಕ್ಷೆ, ಆ ಸ್ಥಾನ ನಿರ್ವಹಿಸಿದ ಮೊದಲ (ಮತ್ತು ಏಕೈಕ) ಮಹಿಳೆ ಮುಂತಾಗಿ ಹಲವು ಮೊದಲುಗಳಿಂದ ಗಮನ ಸೆಳೆಯುವ ವ್ಯಕ್ತಿತ್ವ ಅವರದು. ಅವರ ಬದುಕು. ಸಾಮಾಜಿಕ ಕಾರ್ಯಗಳು, ಎದುರಿಸಿದ ಸವಾಲುಗಳನ್ನು ಇಂದಿಗೆ ಕಟ್ಟಿಕೊಟ್ಟಿರುವ ಪುಸ್ತಕ ‘ಜನಸೇವಾಸಕ್ತೆ ಯಶೋಧರಾ ದಾಸಪ್ಪ’
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE