ಕವಿಯಾಗಿ ನೂರಾರು ಕವಿತೆಗಳನ್ನು ಬರೆದಿರುವ ಇರೋಮ್ ಶರ್ಮಿಳಾ ಅವರ ಬದುಕಿನ ಚಿತ್ರಣವನ್ನು ಸಂಗ್ರಹಿಸಿ ಒಂದೆಡೆ ತಂದಿರುವ ಸಂತೋಷಕುಮಾರ ಮೆಹೆಂದಳೆ ಅವರ ’ಇರೋಮ್ ಶರ್ಮಿಳಾ’ ಕೃತಿ ಹಸಿವಉ ಗೆದ್ದ ಹುಡುಗಿಯ ಜೀವನಗಾಥೆಯನ್ನು ಪರಿಚಯಿಸುತ್ತದೆ.
ಹಸಿವು ಗೆದ್ದ ಹುಡುಗಿ, ಪ್ರಮೀಳೆಯರ ನಾಡಿನಲ್ಲಿ, ಹೂವಿನಂತಹ ಹುಡುಗಿ, ಸ್ಥಳೀಯ ಪರಿಸರದ ವೈರುಧ್ಯಗಳು, ಹೋರಾಟಕ್ಕೊಂದು ಹಿನ್ನೆಲೆ, ಆರಂಭ.., ಉರುಳತೊಡಗಿದ ಕಾಲಚಕ್ರ, ಮದರ್ಸ್ ಫ್ರಂಟ್, ಐರನ್ ಲೇಡಿ ಆಫ್ ಮಣಿಪುರ್…ರಾಜಧಾನಿಯಲ್ಲಿ ಹೋರಾಟ, ಮಣಿಪುರದಲ್ಲಿ ಮುಂದುವರೆದ ಮಥನ, ಸೇವ್ ಶರ್ಮಿಳಾ – ದಶಕದ ಹೋರಾಟ, ಒಂದೂವರೆ ದಶಕ ಹಿಂಗದ ಹಸಿವು, ಪ್ರಸ್ತುತದಲ್ಲಿ ಶರ್ಮಿಳಾ ಹೀಗೆ ಅನೇಕ ಲೇಖನ ಬರಹಗಳು ಇರೋಮ್ ಶರ್ಮಿಳಾ ಬದುಕಿನ ಚಿತ್ರಣವನ್ನೂ ಆಕೆಯ ವ್ಯಕ್ತಿತ್ವವನ್ನೂ ಪರಿಚಯಿಸುತ್ತವೆ.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MORE