‘ಇಮ್ಮಡಿ ನಾಗವರ್ಮನ ಶಾಸ್ತ್ರ ಸಾಹಿತ್ಯ’ ಪತ್ರಕರ್ತ, ಲೇಖಕ ಮಹಮ್ಮದ್ ಬಾಷಾಗುಳ್ಯಂ ಅವರ ಸಂಶೋಧನಾತ್ಮಕ ಕೃತಿ. ಎರಡನೇ ನಾಗವರ್ಮನ ಶಾಸ್ತ್ರ ಗ್ರಂಥಗಳ ಸ್ವರೂಪವನ್ನು ಕುರಿತಂತೆ ವಿವರಣಾತ್ಮಕ ವಾದ ಪರಿಚಯವಾಗಲು ಎಂ ಮಹಮ್ಮದ್ ಬಾಷಾ ಅವರ ಈ ಕೃತಿ ಯನ್ನು ಓದಬೇಕು. ಬಾಷಾ ಅವರು ನಾಗವರ್ಮನ ವಿವರಗಳನ್ನು ಕುರಿತಂತೆ ಇದುವರೆಗೆ ನಡೆದ ಚರ್ಚೆಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಹೀಗಾಗಿ ವಿವರಗಳೆಲ್ಲವೂ ಒಂದೆಡೆ ಸಿಗುತ್ತವೆ. ನಾಗವರ್ಮ ಎಷ್ಟು ಜನ ಎನ್ನುವ ಸಂಶೋದನಾತ್ಮಕ ಚರ್ಚೆಯು ಇಪ್ಪತ್ತನೇಯ ಶತಮಾನದ ಅತ್ಯಂತ ಪ್ರಮುಕವಾದ ವಾಗ್ವಾದಗಳಲ್ಲಿ ಒಂದು. ಜನಪ್ರಿಯ ವಾದ ನರಸಿಂಹಾಚಾರ್ ಅವರ ವಾದವೇ ಈಗ ಸದ್ಯ ದವರೆಗೆ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಾಗವರ್ಮ ಒಬ್ಬನೇ ಎಂಬ ಕಿಡೆಲ್ ಅವರ ವಾದವನ್ನು ಮಹದೇವಪ್ಪ ಸಿ ಅವರು ಪ್ರಬಲವಾಗಿ ಮಂಡಿಸುತ್ತಿದ್ದಾರೆ. ನಾಗವರ್ಮ ಒಬ್ಬನೇ ಎನ್ನುವುದು ಗಟ್ಟಿಯಾದರೆ ಪ್ರಾಚೀನ ಕನ್ನಡ ಸಾಹಿತ್ಯ, ಸಂಸ್ಕೃತಿ ಕುರಿತ ಚಿಂತನೆಗಳು ಕುತೂಹಲಕರವಾದ ಆಶಯಗಳಿಗೆ, ನಿರ್ಣಯಗಳಿಗೆ ದಾರಿ ಮಾಡಿಕೊಡುತ್ತದೆ. ನಾಗವರ್ಮನ ಕುರಿತು ತಿಳಿಯಲು ಈ ಕೃತಿಯು ಮಾರ್ಗ ಸೂಚಿಯಂತಿದೆ.
©2024 Book Brahma Private Limited.