ಬಡತನದಲ್ಲಿ ಬದುಕಿದ, ತತ್ವ ನಿಷ್ಠುರಗಳಲ್ಲಿ ಮಿಂದು ಮಾಗಿದ ವ್ಯಕ್ತಿತ್ವ ಸಿರಿತನಕ್ಕೆಬಾಗಲಿಲ್ಲ, ಮೊದಲ ವೃತ್ತಿಯಾಗಿ ಬೋಧನೆಯನ್ನು ಆರಿಸಿಕೊ೦ಡರು. ಒಲವಿನ ವೃತ್ತಿಯಾಗಿದ್ದರೂ, ಗಾಂಧೀಜಿಯ ಪ್ರಭಾವಕ್ಕೆ ಸಿಲುಕಿದವರು. ಗಾಂಧಿ ತತ್ತ್ವ ಪ್ರಸಾರಕ್ಕೆ ಅಣಿಯಾದವರು. ಆಹಿಂಸಾತತ್ತ್ವ, ವೈಶಾಲ್ಯತೆಯು, ತಮ್ಮ ಮನೋಧರ್ಮಕ್ಕೆ ಹೊಂದಿಕೊಂಡಿದ್ದ ಕಾರಣ, ಗಾ೦ಧಿಯತ್ತ ಆಕರ್ಷಿತರಾಗಿ ಪ್ರಸಾರಕ್ಕೆ ನಿಂತವರು, ಮೀಸಲುಗೊ೦ಡವರು.ಪತ್ರಿಕೋದ್ಯಮದಲ್ಲಿ ಸಾಹಸಿಗರಾಗಿ, ಎಲ್ಲ ಕಾರ್ಪಣ್ಯಗಳ ನಡುವೆಯೂ ಅದನ್ನು ಸಾರ್ಥಕವಾಗಿ ಬಳಸಿದವರು. ಬೇರೆ ಬೇರೆ ಭಾಷೆ ಕಲಿತು ಕನ್ನಡಕ್ಕೆ ಅನುವಾದಿಸಿ ಕನ್ನಡದಿ೦ದ ಬೇರೆ ಭಾಷೆಗಳಿಗೆ, ಸಾಹಿತ್ಯಕ ಚೆಲುವಿನಿಂದ ಶಾಸ್ತ್ರೀಯ ವಿಷಯಗಳನ್ನು ಅನುವಾದಿಸಿದವರು. ಸಾಮಾಜಿಕ, ಆರ್ಥಿಕ ಎಶ್ಲೇಷಣೆಯೊಡನೆ ಪತ್ರಿಕಾ ವಲಯಕ್ಕೆ ಮಾದರಿ ಆದವರು. ಶರಣಸಾಹಿತ್ಯ-ಸಂಸ್ಥೃತಿಯನ್ನು ಸರಳವಾಗಿ ಸ೦ವಹನಿಸಿದವರು, ಬಹುಮುಖ ಪ್ರತಿಭೆಯ ಈ ಎಲ್ಲ ಗುಣಾವರಣದ ಹರ್ಡೇಕರ ಮಂಜಪ್ಪನವರ ವ್ಯಕ್ತಿತ್ವವನ್ನು. ಕಾಯಕಶಾಲೀನತೆಯನ್ನು ಸೋದ್ಧೃತಗಳೊಡನೆ ಓದುಗರಿಗೆ ತೆರೆದು ತೋರಿಸುವ ಕೃತಿ ಇದಾಗಿದೆ.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MORE