ಸಿವಿಜಿ ಪ್ರಕಾಶನದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಿರಿಯ ಮಕ್ಕಳ ಸಾಹಿತಿ ಎ,ಕೆ,ರಾಮೇಶ್ವರ ಸಂಪಾದಕತ್ವದಲ್ಲಿ ಬೆಳ್ಳಿ ಬೆರಗು ಎಂಬ ಹೆಸರಿನಡಿ, ಮಕ್ಕಳ ಸಾಹಿತ್ಯ ನಿರ್ಮಿಸಿದ ಮಹನೀಯರ ಜೀವನ ಚಿತ್ರಣ ಹಾಗೂ ಅವರ ಕೃತಿಗಳ ಕುರಿತಾದ ಪುಸ್ತಕಗಳ ಪ್ರಕಟಣೆ ಪ್ರಾರಂಭವಾಯಿತು. ಮರೆಯಲಾಗದ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲಿಕೆಯ 29 ನೇ ಕೃತಿಯಾಗಿ ಜಿ. ಪಿ. ರಾಜರತ್ನಂ ಕುರಿತಾದ ಪುಸ್ತಕ ರಚನೆಯನ್ನು ವೈ,ಜಿ,ಭಗವತಿಯವರು ರಚಿಸಿದರು. ಜಿ,ಪಿ,ರಾಜರತ್ನಂ ಅವರ ಬಾಲ್ಯ, ಶಿಕ್ಷಣ, ಉದ್ಯೋಗಕ್ಕಾಗಿ ಅಲೆದಾಟ. ಅವರ ಒಟ್ಟು ಮಕ್ಕಳ ಕೃತಿಗಳ ಅವಲೋಕನ ನೋಡಬಹುದು ಕತೆ, ಕವನ, ನಾಟಕ ಇವೆಲ್ಲವುಗಳ ಪರಿಚಯಾತ್ಮಕ ಲೇಖನಗಳಿವೆ.
ಲೇಖಕ, ಮಕ್ಕಳ ಸಾಹಿತಿ ವೈ. ಜಿ. ಭಗವತಿ ಅವರು ಪ್ರಸ್ತುತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಿಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರೆಯದಿಂದಲೋ ಸಣ್ಣ ಕಥೆ, ಮಕ್ಕಳ ಕಥೆ, ಕವನ, ಕಾದಂಬರಿ, ಲೇಖನ ರಚನೆಯಲ್ಲಿ ಆಸಕ್ತಿ ತಳೆದಿದ್ದಾರೆ. ‘ದೇಮಮ್ಮನ ಲೋಟ’(2016), `ಸುಂದ್ರಮ್ಮಜ್ಜಿಯ ಮೊಮ್ಮಗನಂತೆ’ (2019) ಅವರ ಪ್ರಕಟಿತ ಮಕ್ಕಳ ಕಥಾಸಂಕಲನ. ಅವರ ‘ಬದುಕಿನ ಸುತ್ತಮುತ್ತ’ (2018) ಲೇಖನಸಾಹಿತ್ಯ ಪ್ರಕಟವಾಗಿವೆ. ಅವರ ಮತ್ತೊಂದು ‘ಮತ್ತೆ ಹೊಸ ಗೆಳೆಯರು’ ಎಂಬ ಮಕ್ಕಳ ಕಾದಂಬರಿ ನೈರುತ್ಯ ಕನ್ನಡ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಕಳೆದ ಒಂದೂವರೆ ವರ್ಷದಿಂದ ...
READ MORE