ಸೇನಾ ಪದವಿಯನ್ನು ಪಡೆದುಕೊಂಡ ಮೊಟ್ಟಮೊದಲ ಕೊಡವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕ್ವೆಟ್ಟಾದಲ್ಲಿನ ಸಿಬ್ಬಂದಿ ಕಾಲೇಜನ್ನು ಪ್ರವೇಶಿಸಿದ ಮೊಟ್ಟಮೊದಲ ಭಾರತೀಯ ಅಧಿಕಾರಿ, ಮೊಟ್ಟಮೊದಲ ಭಾರತೀಯ ಬ್ರಿಗೇಡಿಯರ್, ಮೊಟ್ಟಮೊದಲ ಭಾರತೀಯ ಮೇಜರ್ ಜನರಲ್, ಮೊಟ್ಟಮೊದಲ ಸರ್ವೋಚ್ಚ ಸೇನಾಧಿಪತಿಯೂ ಆಗಿದ್ದರು. ಅವರಿಗೆ ಯೋಧರ ಬಗೆಗೆ ಅಪಾರವಾದ ಪ್ರೀತಿ ಇತ್ತು. ಅವರ ಸಾಧನೆಗೆ ಭಾರತ ಸರ್ಕಾರ ಫೀಲ್ಡ್ ಮಾರ್ಷಲ್ ಪದವಿಯನ್ನು ನೀಡಿ ಗೌರವಿಸಿದೆ. ಇಂತಹ ಶಿಸ್ತಿನ ಸಿಪಾಯಿಯ ಖಾಸಗಿ ಮತ್ತು ಸರ್ಕಾರಿ ಪತ್ರಾಗಾರಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಒಳಗೊಂಡಿರುವ ಈ ಕೃತಿಯು ಅವರ ಜೀವನ ವಿವರಗಳನ್ನು ಕಟ್ಟಿಕೊಡುವ ಒಂದು ಉತ್ತಮ ಕೃತಿಯಾಗಿದೆ.
ಲೇಖಕ, ಅನುವಾದಕ ಪ್ರಧಾನ್ ಗುರುದತ್ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ. ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ...
READ MORE