ಡಿ.ಆರ್. ಬಳೂರಗಿ ಅವರು 2012 ನೇ ಸಾಲಿನ ಹಸೂಡಿ ವೆಂಕಟಶಾಸ್ತ್ರಿ, ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾದವರು. ಎನ್ರಿಕೊ ಫರ್ಮಿ ತಾತ್ವಿಕ ಮತ್ತು ಭೌತ ವಿಜ್ಞಾನಗಳೆರಡರಲ್ಲೂ ಅಭೂತಪೂರ್ವ ಸಂಶೋಧನೆ ಮಾಡಿದ ಅಸಾಧಾರಣ ವಿದ್ಯಾರ್ಥಿ. ಅಣುವಿಕಿರಣಗ ಬಗ್ಗೆ ಈತ ಮಾಡಿದ ಸಾಧನೆ, ಸಂಶೋಧನೆ , ನಡೆಸಿದ ಅಧ್ಯಯನ , ಇವರಿಗೆ ಇದ್ದ ಅಪಾರ ಜ್ಞಾನ ಎಲ್ಲವೂ ಒಂದಕ್ಕಿಂತ ಒಂದು ಮಿಗಿಲಾದವು. ಈತನ ದೃಷ್ಟಿಕೋನ, ಈತನಿಗೆ ಇದ್ದ ವಿಶಿಷ್ಟ ಕಲ್ಪನಾ ಶಕ್ತಿ,ಈತ ಪರಿಚಯಿಸಿದ ಗೃಹಣ ಸಾಮರ್ಥ್ಯಕ್ಕೆ ಎಲ್ಲವೂ ತಲೆದೂಗಬೆಕಾಗಿದೆ. ಅಣುಗಳ ಬಗ್ಗೆ ಮಾಡಿದ ಅಧ್ಯಯನ , ಅವುಗಳ ವಿಕಿರಣ ಪಟುತ್ವದ ಬಗ್ಗೆ ಮಾಡಿದ ಸಂಶೋಧನೆಗಳ ಬಗ್ಗೆ ಮಾಹಿತಿಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
"ಸುಗ್ಗಿಯು ಬಂದಿತು ಹಿಗ್ಗನು ತಂದಿತು ನಮ್ಮಯ ನಾಡಿನ ಜನಕೆಲ್ಲ" ಶಾಲಾ ಮಟ್ಟದ ಕನ್ನಡ ಪುಸ್ತಕದಲ್ಲಿ ಪದ್ಯವಾಗಿದ್ದ ಈ ಸುಗ್ಗಿ ಹಾಡನ್ನು ಕೇಳದವರಿಲ್ಲ. ಈ ಪದ್ಯದ ಕತೃ ದ.ರಾ ಬಳೂರಗಿ (ಡಿ.ಆರ್. ಬಳೂರಗಿ). ಬಳೂರಗಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದ (1954) ಸಮಯದಲ್ಲಿ ಬರೆದ ಹಾಡಿದು. ಮೂಲತಃ ವಿಜಯಪುರ ಜಿಲ್ಲೆ ಸಾರವಾಡದವರಾದ ಬಳೂರಗಿ ಅವರು ಜನಿಸಿದ್ದು 1943 ಜುಲೈ 20ರಂದು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ವಿಜಯಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ...
READ MORE