‘ದೃಶ್ಯಾನುಭವ’ ಕೃತಿಯು ಮೋಹನರಾವ ಬಿ. ಪಂಚಾಳ ಅವರ ದೃಶ್ಯಕಲೆಯ ಕುರಿತಾದ ಸಂಶೋಧನಾತ್ಮಕ ಲೇಖನ ಸಂಕಲನವಾಗಿದೆ. ಇಲ್ಲಿ ಲೇಖಕರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಅನೇಕ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಹೆಸರಾಂತ ಚಿತ್ರಕಲಾವಿದ ಎಸ್. ಎಂ. ಪಂಡಿತರ ಕುರಿತು ಸಂಶೋಧನೆ ಮಾಡಿ ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ಬಿದರಿ ಕರಕುಶಲ ಕಲೆ, ಶೀಗಿ ಚಿತ್ರಕಲೆ, ರೇಖಾಚಿತ್ರಗಳ ಬಗ್ಗೆ ವಿವರಣಾತ್ಮಕ ಲೇಖನಗಳಿವೆ. ವಿಶ್ವವಿಖ್ಯಾತ ಪಿಕಾಸೊ, ಎಸ್. ಎಂ. ಪಂಡಿತರ ಕಲಾಕೃತಿಗಳ ಬಗ್ಗೆ ಕೆಲವು ಮಾಹಿತಿಗಳಿದ್ದು ಅವರ ಸಂಕ್ಷಿಪ್ತ ಪರಿಚಯವೂ ಇಲ್ಲಿದೆ. ಕೆಲವೊಮ್ಮೆ ಮಾತಿನಲ್ಲಿ ಕೂಡ ಬಣ್ಣಿಸಲಾಗದ ಅಭಿವ್ಯಕ್ತಿಯನ್ನು ಚಿತ್ರಕಲೆಯ ಮೂಲಕ ತಿಳಿಸಿಕೊಟ್ಟ ಕಲಾವಿದರಿದ್ದಾರೆ. ಘಟಿಸಿದ ಕೆಲವು ಪ್ರಸಂಗಗಳನ್ನು ಜೀವಂತವಾಗಿರಿಸುವ ಉದ್ದೇಶದಿಂದ ಚಿತ್ರಕಲೆ-ಶಿಲ್ಪಕಲೆಗಳ ಉಗಮವಾಗಿದ್ದಿರಬಹುದು. ಚಿತ್ರ-ಶಿಲ್ಪದ ಮೂಲಕ ಪರಸ್ಪರ ಸಂವಹನ ಸಾಧ್ಯ. ಮುಂದೆ ಬೆಳವಣಿಗೆಯಾಗಿ ಕಲಾವಿದನ ಕಲನೆ-ಪ್ರತಿಭೆಯಿಂದಾಗಿ ವಿವಿಧ ಅಭಿವ್ಯಕ್ತಿಗಳು ಮೂಡಿಬಂದಿರಲು ಸಾಧ್ಯ, ಚಿತ್ರಗಳಲ್ಲಿ ಕುಂಚದ ಬಳಕೆ, ಪೆನ್ಸಿಲ್‌ಗಳಿಂದ ರೇಖಾಚಿತ್ರ ರಚನೆ, ತೈಲವರ್ಣಚಿತ್ರ, ಕಪ್ಪು ಬಿಳುಪು ವರ್ಣ ಸಂಯೋಜನೆ ಇದನ್ನು ಕಲಾವಿದ ಹೇಗೆ ಮಾಡುತ್ತಾನೆಂಬ ಮಾಹಿತಿಯೂ ಇದೆ.
(ಹೊಸತು, ಜನವರಿ 2011, ಪುಸ್ತಕದ ಪರಿಚಯ)
ಈ ಪುಸ್ತಕದ ಲೇಖಕರು ದೃಶ್ಯಕಲೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದು, ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಅನೇಕ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಹೆಸರಾಂತ ಚಿತ್ರಕಲಾವಿದ ಎಸ್. ಎಂ. ಪಂಡಿತರ ಕುರಿತು ಸಂಶೋಧನೆ ಮಾಡಿ ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ಬಿದರಿ ಕರಕುಶಲ ಕಲೆ, ಶೀಗಿ ಚಿತ್ರಕಲೆ, ರೇಖಾಚಿತ್ರಗಳ ಬಗ್ಗೆ ವಿವರಣಾತ್ಮಕ ಲೇಖನಗಳಿವೆ. ವಿಶ್ವವಿಖ್ಯಾತ ಪಿಕಾಸೊ, ಎಸ್. ಎಂ. ಪಂಡಿತರ ಕಲಾಕೃತಿಗಳ ಬಗ್ಗೆ ಕೆಲವು ಮಾಹಿತಿಗಳಿದ್ದು ಅವರ ಸಂಕ್ಷಿಪ್ತ ಪರಿಚಯವೂ ಇಲ್ಲಿದೆ. ಕೆಲವೊಮ್ಮೆ ಮಾತಿನಲ್ಲಿ ಕೂಡ ಬಣ್ಣಿಸಲಾಗದ ಅಭಿವ್ಯಕ್ತಿಯನ್ನು ಚಿತ್ರಕಲೆಯ ಮೂಲಕ ತಿಳಿಸಿಕೊಟ್ಟ ಕಲಾವಿದರಿದ್ದಾರೆ. ಘಟಿಸಿದ ಕೆಲವು ಪ್ರಸಂಗಗಳನ್ನು ಜೀವಂತವಾಗಿರಿಸುವ ಉದ್ದೇಶದಿಂದ ಚಿತ್ರಕಲೆ-ಶಿಲ್ಪಕಲೆಗಳ ಉಗಮವಾಗಿದ್ದಿರಬಹುದು. ಚಿತ್ರ-ಶಿಲ್ಪದ ಮೂಲಕ ಪರಸ್ಪರ ಸಂವಹನ ಸಾಧ್ಯ. ಮುಂದೆ ಬೆಳವಣಿಗೆಯಾಗಿ ಕಲಾವಿದನ ಕಲನೆ-ಪ್ರತಿಭೆಯಿಂದಾಗಿ ವಿವಿಧ ಅಭಿವ್ಯಕ್ತಿಗಳು ಮೂಡಿಬಂದಿರಲು ಸಾಧ್ಯ, ಚಿತ್ರಗಳಲ್ಲಿ ಕುಂಚದ ಬಳಕೆ, ಪೆನ್ಸಿಲ್‌ಗಳಿಂದ ರೇಖಾಚಿತ್ರ ರಚನೆ, ತೈಲವರ್ಣಚಿತ್ರ, ಕಪ್ಪು ಬಿಳುಪು ವರ್ಣ ಸಂಯೋಜನೆ ಇದನ್ನು ಕಲಾವಿದ ಹೇಗೆ ಮಾಡುತ್ತಾನೆಂಬ ಮಾಹಿತಿಯೂ ಇದೆ.
©2024 Book Brahma Private Limited.