ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಚಂದ್ರಶೇಖರ ಕಂಬಾರ ಅವರು ಕನ್ನಡ ರಂಗಭೂಮಿಗೆ ತನ್ನದೇ ವಿಶಿಷ್ಟ ಕೊಡುಗೆ ನೀಡಿದವರು. ನಾಟಕಕಾರರಾಗಿ ಮಹತ್ವದ ಸ್ಥಾನ ಪಡೆದಿರುವ ಕಂಬಾರ ಅವರು ರಂಗ ನಿರ್ದೇಶಕ, ನಟ, ಸಂಗೀತ ನಿರ್ದೇಶಕ, ಗಾಯಕರಾಗಿಯೂ ಜನಪ್ರಿಯರು. ಜಾನಪದ ರಂಗಭೂಮಿಯಿಂದ ಪಡೆದ ಪ್ರೇರಣೆಯನ್ನು ಆಧುನಿಕ ರಂಗಕ್ರಿಯೆಗೆ ಅಳವಡಿಸಿದ ಕಂಬಾರ ಅವರ ಸಾಧನೆಯು ಅನನ್ಯವಾದದ್ದು. ಕಂಬಾರ ಅವರ ರಂಗಭೂಮಿಯ ಕೊಡುಗೆ ಹಾಗೂ ಅವರ ಜೀವನ ಸಾಧನೆ- ಸಾಹಿತ್ಯ ಕೃತಿಗಳನ್ನು ಈ ಕೃತಿಯು ಪರಿಚಯಿಸುತ್ತದೆ.
ಎಚ್. ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನಕಟ್ಟೆಯಲ್ಲಿ 29-11-1962 ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣಿ ಸಾಹಿತ್ಯಲೋಕದ ಗಮನ ಸೆಳೆದಿದ್ದಾರೆ. ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಸಾಹಿತ್ಯ ಮತ್ತು ಶಿಕ್ಷಣ ಇವೆಲ್ಲದರಲ್ಲಿ ಪದವಿಗಳನ್ನು ಪಡೆದಿರುವ ಅವರು, ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಮೀಯುವ ಆಟ, ಕಡಲು, ವಸುಂಧರೆಯ ಗ್ಯಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ...
READ MORE