ಡಾ.ಸಿ.ಆರ್‌. ಚಂದ್ರಶೇಖರ್‌

Author : ಕೆ.ಆರ್. ಶ್ರೀಧರ

Pages 86

₹ 45.00




Year of Publication: 2012
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಡಾ. ಸಿ.ಆರ್. ಚಂದ್ರಶೇಖರ್ ಅವರು ಪ್ರಸಿದ್ಧ ಮನೋವಿಜ್ಞಾನಿ ಮತ್ತು ಬರಹಗಾರರು. ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ಇವರ ಜೀವನ ಸಾಧನೆಯ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. 

About the Author

ಕೆ.ಆರ್. ಶ್ರೀಧರ

ಡಾ. ಕೆ.ಆರ್ .  ಶ್ರೀಧರ್ ಅವರು ಮನೋವೈದ್ಯರು. ಹದಿನಾಲ್ಕು ವರ್ಷಗಳ ಸರ್ಕಾರೀ ಸೇವೆಯ ನಂತರ ಕಳೆದ ಮೂವತ್ತು ವರ್ಷಗಳಿಂದ ಶಿವಮೊಗ್ಗೆಯಲ್ಲಿ ಖಾಸಗೀ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ 'ಗ್ರಾಮೀಣ ಉಚಿತ ಮಾನಸಿಕ ಆರೋಗ್ಯ ಶಿಬಿರಗಳು' ಈ ಕ್ಷೇತ್ರದಲ್ಲಿ ಇವರು ಸಾಧಿಸಿದ ಒಂದು ದಾಖಲೆ. ಕಳೆದ ಹನ್ನೊಂದು ವರ್ಷಗಳಿಂದ ಇವರು  ಇತರೇ ವೈದ್ಯ ಸಮೂಹದೊಂದಿಗೆ ನಡೆಸುತ್ತಿರುವ ಕ್ಷೇಮ ಟ್ರಸ್ಟ್ (ರಿ.), 'ಒಂದು ಸಮಗ್ರ ಉಚಿತ ಆರೋಗ್ಯ ಆಪ್ತ ಸಲಹಾ ಕೇಂದ್ರ'. ಇದರ ಮೂಲಕ ಸಾರ್ವಜನಿಕರಿಗೆ ಇವರು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗಿವೆ ...

READ MORE

Related Books