ಪ್ರಗತಿಶೀಲ ಸಾಹಿತ್ಯ ಪರಂಪರೆಯಲ್ಲಿ ಬಸವರಾಜ ಕಟ್ಟಿಮನಿ ಬಹುದೊಡ್ಡ ಹೆಸರು. ಕಾದಂಬರಿ-ಕತೆಗಳ ಮೂಲಕ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಯಲ್ಲಿ ಕಟ್ಟಿದ ಕಟ್ಟಿಮನಿ ಅವರ ಬದುಕು-ಬರಹ ಪರಿಚಯಿಸುವ ಕೃತಿಯಿದಿ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ವಿಶಿಷ್ಟ ಬಗೆಯಲ್ಲಿ ಸ್ಪಂದಿಸಿದ ಡಾ. ಬಸವರಾಜ ಕಟ್ಟಿಮನಿಯವರ ಬದುಕು ಬರಹಗಳನ್ನು ಕುರಿತ ಕೃತಿ ಇದಾಗಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...
READ MORE