ಡಾ.ಬಿ.ಕೆ.ಎಸ್. ಅಯ್ಯಂಗಾರ್‌

Author : ಎಸ್.ಎನ್. ಓಂಕಾರ್

Pages 84

₹ 60.00




Year of Publication: 2014
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಬೆಳ್ಳೂರು ಕೃಷ್ಣಕುಮಾರ್‌ ಸುಂದರರಾಜ ಅಯ್ಯಂಗಾರ್‌ ಅವರು ಪ್ರಸಿದ್ದ ಯೋಗ ಪಿತಾಮಹ. ಭಾರತೀಯ ಯೋಗವನ್ನು ವಿಶ್ವದಾದ್ಯಂತ ಪಸರಿಸಿದವರು. ಯೋಗದ ಬಗ್ಗೆ ಹಲವು ವಿದ್ವತ್‌ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ವಿದೇಶದಲ್ಲಿ ಯೋಗದ ಪ್ರಭಾವವನ್ನು ಸಾರಿದ ಮೊದಲಿಗರು. ಅಮೆರಿಕಾದ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಿದ ಇವರು ತಮ್ಮ ಯೋಗದ ಪ್ರಭಾವದಿಂದ ಅಪಾರ ಜನರ ಮನಗೆದ್ದರು. ಇವರು ಬರೆದ ’light on yoga’ ಎಂಬ ಕೃತಿಯೂ 17  ಭಾಷೆಗಳಿಗೆ ಭಾಷಾಂತರಗೊಂಡಿದೆ. ಪದ್ಮಶ್ರೀ(1991) ಪದ್ಮ ಭೂಷಣ(2002) ಪದ್ಮ ವಿಭೂಷಣ (2014) ದೊರತಿದೆ.  ಲೇಖಕರು ಈ ಕೃತಿಯ ಮೂಲಕಬಿ.ಕೆ.ಎಸ್. ಅಯ್ಯಂಗಾರ್‌ ಅವರ  ಪರಿಚಯವನ್ನು ಓದುಗರ ಮುಂದಿಟ್ಟಿದ್ದಾರೆ. 

About the Author

ಎಸ್.ಎನ್. ಓಂಕಾರ್

ವೃತ್ತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ.ಎಸ್.ಎನ್. ಓಂಕಾರ್ ಅವರು ಬಿ.ಕೆ.ಎಸ್. ಅಯ್ಯಂಗಾರ್ ಅವರ ಆಪ್ತ ಶಿಷ್ಯರುಗಳಲ್ಲಿ ಒಬ್ಬರು. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಯೋಗ ವಿಜ್ಞಾನವನ್ನು ಅಭ್ಯಾಸ, ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಿ, ಯೋಗ ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ನಡೆಸುತ್ತಿರುವ ಇವರು ಯೋಗ ಶಿಕ್ಷಣವನ್ನು ಕ್ರೀಡಾ ಕ್ಷೇತ್ರದಲ್ಲಿ ಪರಿಚಯಿಸಿದವರಲ್ಲೇ ಮೊದಲಿಗರಾಗಿದ್ಧಾರೆ.  ...

READ MORE

Related Books