ಡಾ. ಕಲ್ಯ ಜಗನ್ನಾಥರಾವ್

Author : ವೈ. ತುಳಜಪ್ಪ

Pages 96

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಡಾ. ಕಲ್ಯಾ ಜಗನ್ನಾಥ ರಾವ್ ಭಾರತೀಯ ಭೌತಿಕ ರಸಾಯನಶಾಸ್ತ್ರಜ್ಞ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಮೆರಿಟಸ್ ಪ್ರಾಧ್ಯಾಪಕರು. ನ್ಯಾನೊವಸ್ತುಗಳು, ಅಸ್ಫಟಿಕ ವಸ್ತುಗಳು ಮತ್ತು ಪಿಂಗಾಣಿಗಳ ಕುರಿತಾದ ಸಂಶೋಧನೆಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 1964 ರವರೆಗೆ ಐಐಟಿ ಖಾನ್ಪುರದಲ್ಲಿ ಡಾಕ್ಟರೇಟ್ ಅಧ್ಯಯನಕ್ಕಾಗಿ ಪ್ರಖ್ಯಾತ ರಸಾಯನಶಾಸ್ತ್ರಜ್ಞ ಸಿ.ಎನ್. ಆರ್. ರಾವ್, ಭಾರತ್ ರತ್ನ ಪ್ರಶಸ್ತಿ ವಿಜೇತ ಇವರ ಮಾರ್ಗದರ್ಶನದಲ್ಲಿ ಸೇರಿಕೊಂಡರು.

1967ರಲ್ಲಿ ಪಿಎಚ್‌.ಡಿ ಪದವಿ ಪಡೆದು, 1972 ರವರೆಗೆ ಸಿ.ಎನ್.ಆರ್.ರಾವ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ನಂತರದ ಅಧ್ಯಯನವನ್ನು ಮುಂದುವರೆಸಿದರು. ಅಮೆರಿಕಾಕ್ಕೆ ತೆರಳಿದ  ಇವರು ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಸಿ. ಎ. ಏಂಜೆಲ್ ಅವರಲ್ಲಿ ಮತ್ತು ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಎ. ಆರ್. ಕೂಪರ್ ಅವರೊಂದಿಗೆ ಕೆಲಸ ಮಾಡಿದರು. 1972 ರಲ್ಲಿ ಭಾರತಕ್ಕೆ ಮರಳಿದ ಕಲ್ಯಾರವರು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ಗೆ  ಸೇರಿದರು, ಅಲ್ಲಿ ಇವರು 1978 ರವರೆಗೆ ಕೆಲಸ ಮಾಡಿದರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ  ರಚನಾತ್ಮಕ ರಸಾಯನಶಾಸ್ತ್ರ ಘಟಕದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಸಿದರು. ರಾಸಾಯನಿಕ ಶಾಸ್ತ್ರಕ್ಕೆ ಸಂಬಂಧಿಸಿದ ಇವರ ಸಂಶೋಧನಾ ಕಾರ್ಯಗಳು ವಿಜ್ಞಾನ ವಿಭಾಗಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ. 

ಇಂತಹ ಘನ ವಿಜ್ಞಾನಿಯ ಸಂಕ್ಷಿಪ್ತ ಪರಿಚಯವನ್ನು ಉದಯಭಾನು ಸುವರ್ಣ ಪುಸ್ತಕಮಾಲೆ ಸರಣಿಯಲ್ಲಿ ಸಂಪಾದಿಸಿ, ಡಾ. ವೈ. ತುಳಜಪ್ಪನವರು ಪುಸ್ತಕ ರೂಪಕ್ಕೆ ತಂದಿದ್ದಾರೆ. 

Related Books