ದೂರ ಸಾಗರ

Author : ಮೀರಾ ಪಿ.ಆರ್‌.

Pages 136

₹ 120.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಅಮೆರಿಕದಲ್ಲಿ ಕುಳಿತು ಕನ್ನಡವನ್ನು ಧ್ಯಾನಿಸುವ ಹಲವು ಮನಸ್ಸುಗಳಿವೆ. ಅಂತಹ ಮನಸ್ಸುಗಳಲ್ಲಿ ಮೀರಾ ಪಿ.ಆರ್‌. ಒಬ್ಬರು. ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯ, ಫೋಟೋಗ್ರಫಿ ಹೀಗೆ ಅವರ ಆಸಕ್ತಿಯ ಕ್ಷೇತ್ರಗಳು ಹಲವು. ’ದೂರ ಸಾಗರ’ ಅವರ ಅಂಕಣ ಬರಹ ಸೇರಿದಂತೆ ಇಪ್ಪತ್ನಾಲ್ಕು ಲೇಖನಗಳನ್ನು ಹೊಂದಿರುವ ಸಂಗ್ರಹ.

ಕೃತಿಗೆ ಬೆನ್ನುಡಿ ಬರೆದಿರುವ ಕವಿ ಜಯಂತ ಕಾಯ್ಕಿಣಿ, ಪರಿಚಿತದಲ್ಲಿ ಅಪರಿಚಿತವನ್ನು ಅಪರಿಚಿತದಲ್ಲಿ ಪರಿಚಿತವನ್ನು ಮನಗಾಣುವ ನಿಮ್ಮ ಈ ಬರಹಗಳು ಚುರುಕಾಗಿವೆ.  ಅಕ್ಷರ ಮತ್ತು ಆಕಾರಗಳ ಮಿತಿಯನ್ನು ಅರಿತೂ ಹೊಸ ಸೂಕ್ಷ್ಮಗಳಿಗಾಗಿ ಚಡಪಡಿಸುವ ಮತ್ತು ಪಡಿಯಚ್ಚುಗಳನ್ನು, ಮೌಢ್ಯಗಳನ್ನು ನಿಂತ ಕಾಲಲ್ಲಿ ನಿರಾಕರಿಸುವ ನಿಮ್ಮ ನಿಲುವೇ ಈ ಎಲ್ಲ ಬರಹಗಳನ್ನು ಒಗ್ಗೂಡಿಸಿರುವ ಸೂತ್ರವಾಗಿದೆ’ ಎಂದಿದ್ದಾರೆ. 

ಲೇಖಕಿ ಕಾವ್ಯಾ ಕಡಮೆ ನಾಗರಕಟ್ಟೆ ಅವರು ಹೇಳುವಂತೆ ’ಈ ಸಂಕಲನದ ವೈವಿಧ್ಯಮಯ ಲೇಖನಗಳು ಅನೇಕ ವಿಶಿಷ್ಟ ಗುಣಗಳಿಂದ ಗಮನ ಸೆಳೆಯುತ್ತವೆ. ಮುಖ್ಯವಾಗಿ ನನಗೆ ಈ ಬರಹಗಳಲ್ಲಿ ಇಷ್ಟವಾದದ್ದು ಲೇಖಕಿಯ unapologetic ಮನೋಭಾವ. ಯಾವುದೇ ಸಮಯದಲ್ಲೂ ಇಲ್ಲಿನ ಲೇಖನಗಳು ಸ್ವಮರುಕದ ಹಂಗಿನಲ್ಲಿ ನರಳುವುದಿಲ್ಲ. ಅಪ್ಪಟ ವೈಚಾರಿಕ ನಿಲುವಿನ ಗಟ್ಟಿ ಮನಸ್ಸೊಂದು ದಿನನಿತ್ಯದ ಆಗುಹೋಗುಗಳಿಗೆ, ಬಿಟ್ಟು ಬಂದ ನೆನಪುಗಳಿಗೆ ನಿಶ್ಚಲವಾಗಿ ತೆರೆದುಕೊಂಡಾಗ ನಿರಮ್ಮಳವಾಗಿ ಅರಳಬಹುದಾದ ಅನುಭವ ಕಥನ ಇಲ್ಲಿದೆ.’

About the Author

ಮೀರಾ ಪಿ.ಆರ್‌.

ಮೀರಾ ಪಿ.ಆರ್- ಹುಟ್ಟಿದ್ದು ತಮ್ಮ ತಾಯಿಯ ತವರೂರಾದ ಗುಂಡ್ಲುಪೇಟೆಯಲ್ಲಿ. ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ತುಮಕೂರು ಮತ್ತು ಮೈಸೂರಿನಲ್ಲಿ. ಬೆಂಗಳೂರಿನಲ್ಲೂ ಒಂದು ವರ್ಷ ವಾಸವಿದ್ದು ನಂತರ ಅಮೆರಿಕಾದ ಬಾಸ್ಟನ್ ನಲ್ಲಿ 8 ವರ್ಷಗಳನ್ನು ಕಳೆದು, 2008 ರಿಂದ ನ್ಯೂಜೆರ್ಸಿಯಲ್ಲಿ ನೆಲೆ ನಿಂತಿದ್ದಾರೆ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಮೀರಾ ಶಿಕ್ಷಕಿಯಾಗಿ ಹಾಗೂ ಮೈಸೂರು, ಬೆಂಗಳೂರು ಆಕಾಶವಾಣಿಯಲ್ಲಿ ಹಲವು ವರ್ಷ ಅರೆಕಾಲಿಕ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಮತ್ತು ವೆಬ್ ಪೋರ್ಟಲ್ ಗಳಲ್ಲಿ, ಕನ್ನಡ ಸಾಹಿತ್ಯ ರಂಗ ಮತ್ತು ಅಮೆರಿಕದ ಕನ್ನಡ ಕೂಟಗಳ ಹಲವು ...

READ MORE

Related Books