ಅಂತಾರಾಷ್ಟ್ರೀಯ ಆಗುಹೋಗುಗಳ ಮೇಲೆ ಗಂಭೀರವಾದ ಟೀಕೆ, ಟಪ್ಪಣಿ ಹಾಗೂ ವಿಮರ್ಶೆ ಮಾಡಿದ್ದರ ಬಗ್ಗೆ ಈ ಕೃತಿಯಲ್ಲಿ 36 ಲೇಖನಗಳಿವೆ. 2007 - 2009ರ ಅವಧಿಯಲ್ಲಿ ವಿಜಯವಾಣಿಗೆ ಬರೆದ ಅಂಕಣ ಬರೆಹಗಳು. ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಕುರಿತು ಗಂಭೀರ ಕಾಳಜಿಯನ್ನೇ ಮಾತೃಭಾಷೆಯಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಸ್ಟಾಲಿನ್, ಮಾವೋ, ಬುದ್ಧದೇವರ ವಿಮರ್ಶೆ, ಅಮೇರಿಕಾದ ಉದಾರವಾದ ಹಾಗೂ ಯಜಮಾನಿಕೆಯ ವಿಮರ್ಶೆ, ಎಡ-ಬಲಪಂಥಗಳೆಡರಲ್ಲೂ ಇರುವ ಅತಿರೇಕಗಳ ಕುರಿತಾದ ಕಟು ಟೀಕೆ- ಇವೆಲ್ಲವನ್ನೂ ಅವರು ಯಾವುದೇ ತಾತ್ವಿಕ ಕಟ್ಟುಪಾಡುಗಳಿಗೂ ಸಿಕ್ಕುಬೀಳದೇ ಸ್ವತಂತ್ರವಾಗಿ ನಿರ್ವಹಿಸುತ್ತಾರೆ. ಹಾಗೆ ಮಾಡುತ್ತಲೇ, ಹೊಸ ಹೊಸ ಒಳನೋಟಗಳನ್ನು ಇಲ್ಲಿ ನೀಡಿದ್ದಾರೆ.
©2024 Book Brahma Private Limited.