ದಲಿತ ಸೂರ್ಯ

Author : ಎಚ್. ಜೆ. ಲಕ್ಕಪ್ಪಗೌಡ

Pages 132

₹ 72.00




Year of Publication: 2020
Published by: ತನು ಮನು ಪ್ರಕಾಶನ

Synopsys

ಅಂಬೇಡ್ಕರ್ ಈ ದೇಶದ ಚರಿತ್ರೆಯಲ್ಲಿ ಬಹು ದೊಡ್ಡ ಹೆಸರು. ಅವರು ದಲಿತ ಸೂರ್ಯ. ಅವರ ಜೀವನ ಕುರಿತ ವಿಶಿಷ್ಟ ಕಥನವನ್ನು ಕಟ್ಟಿಕೊಡುತ್ತದೆ ಈ ಕೃತಿ. ಒಂದು ಅಪೂರ್ವ ಅಂಬೇಡ್ಕರ್‍ ಜೀವನ ಕಥನ ಎಂದೇ ಇದನ್ನು ಬಣ್ಣಿಸಲಾಗಿದೆ. ಅಂಬೇಡ್ಕರರು ಅನುಭವಿಸಿದ ಅವಮಾನಗಳು, ಅವರೊಳಗಿನ ತಲ್ಲಣಗಳು ಇವೆಲ್ಲವನ್ನೂ ಹಿಡಿದಿಟ್ಟಿರುವ ಬಗೆ ಇಲ್ಲಿ ವಿಭಿನ್ನವಾಗಿದೆ.

About the Author

ಎಚ್. ಜೆ. ಲಕ್ಕಪ್ಪಗೌಡ
(08 May 1939)

ಜಾನಪದ ಹಾಗೂ ಶಿಕ್ಷಣತಜ್ಞ ಎಚ್.ಜೆ. ಲಕ್ಕಪ್ಪಗೌಡ ಅವರು ಸೃಜನಶೀಲ ಸಾಹಿತಿ ಮತ್ತು ಚಿಂತಕರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಅವರು ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನಹಳ್ಳಿಯಲ್ಲಿ 1939ರ ಮೇ 8ರಂದು ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 'ಶ್ರೀರಾಮಾಯಣ ದರ್ಶನಂ : ಒಂದು ವಿಮರ್ಶಾತ್ಮಕ ಅಧ್ಯಯನ' ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರಯ ಅಧ್ಯಾಪನ ಉಪನ್ಯಾಸಕ, ಸಂಶೋಧನ ಸಹಾಯಕರಾದರು. ಕಾಲೇಜು ದಿನಗಳಲ್ಲಿಯೇ ಬರವಣಿಗೆಯ ಗೀಳು ಹಚ್ಚಿಕೊಂಡ ಅವರು 'ಹೆಮ್ಮೆ' ಎಂಬ ಕವನ ಸಂಕಲನ ...

READ MORE

Related Books